ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಪುರುಷರ ಹಾಕಿ (Indian Men’s Hockey) ಸರಣಿಗೆ 23 ಸದಸ್ಯರ ಭಾರತ ತಂಡ ಪ್ರಕಟಗೊಂಡಿದೆ. ಅನುಭವಿ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 26ರಿಂದ ಡಿಸೆಂಬರ್ 4ರ ವರೆಗೆ ಈ ಸರಣಿ ನಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವ ಕಪ್ ಟೂರ್ನಿಯ ಪೂರ್ವಸಿದ್ಧತೆಯಾಗಿ ಈ ಸರಣಿ ನಡೆಯಲಿದೆ.
“ಮುಂಬರುವ ವಿಶ್ವ ಕಪ್‌ನಲ್ಲಿ ಅಗ್ರ ತಂಡಗಳ ವಿರುದ್ಧ ನಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ನಾವು ವಿಶ್ವಾಸವಿಟ್ಟಿರುವ ಅನುಭವಿ ಆಟಗಾರರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದೇವೆ. ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಸ್ಪರ್ಧೆ ನೀಡಲು, ನಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸಲು, ಯುವಕರು ಮತ್ತು ಹಿರಿಯ ಆಟಗಾರರು ಸಂಯೋಜನೆ ಮಾಡಿದ್ದೇವೆ” ಎಂದು ಭಾರತ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ತಿಳಿಸಿದ್ದಾರೆ. ಭಾರತದ ಆತಿಥ್ಯದಲ್ಲಿ ಜನವರಿ 13ರಿಂದ 29ರವರೆಗೆ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ವಿಶ್ವ ಕಪ್ ಹಾಕಿ ಟೂರ್ನಿ ನಡೆಯಲಿದೆ.
ಭಾರತ ತಂಡ
ಗೋಲ್‌ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್, ಶ್ರೀಜೇಶ್ ಪಿ.ಆರ್.
ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಜುಗ್ರಾಜ್ ಸಿಂಗ್, ಮನ್‌ದೀಪ್ ಮೋರ್, ನೀಲಮ್ ಸಂಜೀಪ್ ಕ್ಸೆಸ್, ವರುಣ್ ಕುಮಾರ್.
ಮಿಡ್‌ಫೀಲ್ಡರ್ಸ್: ಸುಮಿತ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್‌ಕುಮಾರ್ ಪಾಲ್, ಮೊಹಮ್ಮದ್ ರಾಹೀಲ್ ಮೌಸೀನ್, ಆಕಾಶ್ದೀಪ್ ಸಿಂಗ್, ಗುರ್ಜಂತ್ ಸಿಂಗ್.
ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್.
ಇದನ್ನೂ ಓದಿ | IND VS PAK | ಟ್ವೀಟ್ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?