Site icon Vistara News

India vs Australia Final: ಫೈನಲ್​ ಪಂದ್ಯಕ್ಕೆ ಭಾರತೀಯ ರೈಲ್ವೆಯಿಂದ ವಿಶೇಷ ರೈಲು ಸೇವೆ

India vs Australia, Final

ಅಹಮದಾಬಾದ್​: ವಿಶ್ವಕಪ್​ನ ಮಹಾ ಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಭಾನುವಾರ ನಡೆಯುವ ಫೈನಲ್(India vs Australia Final)​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ(IND vs AUS) ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲ್ಲಲಿ ನಿಂತು ಕಾಶದು ಕುಳಿತಿದ್ದಾರೆ. ಇದೀಗ ಕ್ರಿಕೆಟ್​ ಅಭಿಮಾನಿಗಳಿಗೆ ಭಾರತೀಯ ರೈಲ್ವೆ(Indian Railways) ವಿಶೇಷ ಆಫರ್​ ನೀಡಿದೆ.

ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್‌ ಪಂದ್ಯ ವೀಕ್ಷಿಸಲು ಅಹಮದಾಬಾದ್​ಗೆ ತೆರಳುವ ಪ್ರಯಾಣಿಕರ ಹೆಚ್ಚಳಕ್ಕೆ ಅನುಗುಣವಾಗಿ ಭಾರತೀಯ ರೈಲ್ವೆ ವಿಶೇಷ ರೈಲು ಸೇವೆಗಳನ್ನು ಏರ್ಪಡಿಸಿದೆ. ಈ ವಿಶೇಷ ರೈಲು ದೆಹಲಿ ಮತ್ತು ಮುಂಬೈಯಿಂದ ಅಹಮದಾಬಾದ್​ಗೆ ತೆರಳಲಿದೆ. ಶನಿವಾರ ಸಂಜೆ ವೇಳೆಗೆ ಹೊರಟು ಮರುದಿನ ಬೆಳಗ್ಗೆ ಅಹಮದಾಬಾದ್​ಗೆ ತಲುಪಲಿದೆ. ಆಗಮಿಸುತ್ತವೆ. ದೆಹಲಿಯಿಂದ ಒಂದು, ಮುಂಬೈಯಿಂದ ಮೂರು ರೈಲುಗಳು ಅಹಮದಾಬಾದ್‌ಗೆ ಸಂಚರಿಸಲಿದೆ. ಆಸನಗಳು ಕಡಿಮೆ ದರದಲ್ಲಿ ಲಭ್ಯವಿವೆ ಎಂದು ಭಾರತೀಯ ರೈಲ್ವೇ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

ಏರ್ ಶೋ

ಟೂರ್ನಿಯ ಉದ್ಘಾಟನ ಸಮಾರಂಭವನ್ನು ಮಾಡದೆ ಇರುವುದರಿಂದ ಇದೀಗ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಬಾಲಿವುಡ್ ತಾರೆಯರು ಭಾಗವಹಿಸಲಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯ ಕಿರಣ್ ತಂಡವು ಪಂದ್ಯಕ್ಕೆ ಮುಂಚಿತವಾಗಿ ಸ್ಥಳದಲ್ಲಿ ಏರ್ ಶೋ ನಡೆಸಲಿದೆ. ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ಏರ್ ಶೋ ನಡೆಸಲಿದೆ ಎಂದು ಗುಜರಾತ್​​ನ ರಕ್ಷಣಾ ಪಿಆರ್​ಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಏರ್ ಶೋನ ಪೂರ್ವಾಭ್ಯಾಸ ಶುಕ್ರವಾರ ಮತ್ತು ಶನಿವಾರ ಈ ಸ್ಟಡಿಯಂನಲ್ಲಿ ನಡೆದಿದೆ. ಬಿಸಿಸಿಐ ಅಧಿಕೃತ ಸಮಾರಂಭದ ಪಟ್ಟಿಯಲ್ಲಿ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಫೈನಲ್ ಮ್ಯಾಚ್​ಗೆ ಮೋದಿ ಹಾಜರ್​?

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿರುವ ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗುವ ನಿರೀಕ್ಷೆಯಿದೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯಕ್ಕೆ ಪ್ರಧಾನಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರೋಚಕ ಪಂದ್ಯವನ್ನು ಪಂದ್ಯವನ್ನು ವೀಕ್ಷಿಸಲು 1.30 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ. ಈ ವೇಳೆ ಹಲವಾರು ಗಣ್ಯರು ಮೈದಾನಕ್ಕೆ ದಾಪುಗಾಲು ಇಡಲಿದ್ದಾರೆ. ಇವರೆಲ್ಲರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ವೀಕ್ಷಿಸಿದ್ದರು. ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಬ್ಬರೂ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಎರಡೂ ತಂಡಗಳ ಆಟಗಾರರನ್ನು ಭೇಟಿಯಾಗಿದ್ದರು.

Exit mobile version