ಪಲ್ಲೆಕೆಲೆ: ಅಧಿಕಾರಯುತ ಪ್ರದರ್ಶನ ನೀಡಿದ ಭಾರತ ಮಹಿಳೆಯರ ತಂಡ ಶ್ರೀಲಂಕಾ ಪ್ರವಾಸದಲ್ಲಿನ ಏಕದಿನ ಸರಣಿಯನ್ನು ಇನ್ನೂ ಒಂದು ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.
ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡದ ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಮಹಿಳೆಯರ ತಂಡ ಸರಣಿ ತನ್ನದಾಗಿಸಿಕೊಂಡಿತು.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹಿಳೆಯರ ತಂಡ ೫೦ ಓವರ್‌ಗಳಲ್ಲಿ ೧೭೩ ರನ್ ಬಾರಿಸಿತು. ರೇಣುಕಾ ಸಿಂಗ್ ೨೮ ರನ್‌ಗಳಿಗೆ ೪ ವಿಕೆಟ್ ಪಡೆದು ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕರಾದ ಶಫಾಲಿ ವರ್ಮ (೭೧*) ಮತ್ತು ಸ್ಮೃತಿ ಮಂಧಾನಾ (೯೪) ಮುರಿಯದ ೧೭೪ ರನ್‌ಗಳ ಜತೆಯಾಟ ನೀಡಿ ಸುಲಭ ಜಯ ತಂದಿತ್ತರು. ಇದು ಮಹಿಳೆಯ ಕ್ರಿಕೆಟ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ಭೇದಿಸಿದ ಗರಿಷ್ಠ ರನ್‌ಗಳ ಗುರಿಯಾಗಿದೆ.
ಭಾರತದ ವನಿತೆಯರು ಮೊದಲ ಪಂದ್ಯವನ್ನು ೪ ವಿಕೆಟ್‌ಗಳಿಂದ ಗೆದ್ದಿದ್ದರು. ಇತ್ತಂಡಗಳ ನಡುವೆ ಗುರುವಾರ ಮೂರನೇ ಪಂದ್ಯ ನಡೆಯಲಿದೆ.
ಇದನ್ನೂ ಓದಿ: England Tour : ಸೋಲಿನ ಸುಳಿಗೆ ಸಿಲುಕಿದ ಭಾರತ