Site icon Vistara News

ಆಫ್ಘನ್​-ಪಾಕ್​ ಪಂದ್ಯದ ವೇಳೆ ತಿರಂಗಾವನ್ನು ಕಸದ ಬುಟ್ಟಿಗೆ ಎಸೆದ ಚೆನ್ನೈ ಪೊಲೀಸರು

Of Cop Pulling Indian Flags Out Of Dustbin

ಚೆನ್ನೈ: ಪಾಕಿಸ್ತಾನ ಮತ್ತು ಅಫಘಾನಿಸ್ತಾನ(PAK vs AFG) ನಡುವೆ ಸೋಮವಾರ ಚೆನ್ನೈಯಲ್ಲಿ ನಡೆದ ವಿಶ್ವಕಪ್​ ಪಂದ್ಯದ ವೇಳೆ ಇಲ್ಲಿನ ಪೊಲೀಸ್​ ಅಧಿಕಾರಿಯೊಬ್ಬರು ರಾಷ್ಟ್ರ ಧಜಕ್ಕೆ ಅಮಮಾನ ಮಾಡಿದ ಘಟನೆ ನಡೆದಿದೆ. ಭಾರತದ ಧ್ವಜವನ್ನು ಹಿಡಿದು ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಗಳಿಗೆ ಬೈದಿದಲ್ಲದೆ ಅವರ ಕೈಯಲ್ಲಿದ್ದ ತಿರಂಗಾವನ್ನು ಕಿತ್ತು ಕಸದ ಬುಟ್ಟಿಗೆ ಹಾಕಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್(Viral Video) ಆಗಿದ್ದು ಪೊಲೀಸ್​ ಅಧಿಕಾರಿ ವಿರುದ್ಧ ಭಾರಿ ಖಂಡನೆ ವ್ಯಕ್ತವಾಗಿದೆ. ಮಾತ್ರವಲ್ಲದೆ ಅವರ ವಿರುದ್ಧ ಸೂಕ್ತ ಕ್ರಮಕ್ಕೂ ಆಗ್ರಹಿಸಲಾಗಿದೆ.

ಚೆನ್ನೈಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯ ವೀಕ್ಷಿಸಲು ಇಲ್ಲಿನ ಕ್ರಿಕೆಟ್​ ಅಭಿಮಾನಿಗಳು ಭಾರತದ ಧ್ವಜ ಹಿಡಿದುಕೊಂಡು ಸ್ಟೇಡಿಯಂಗೆ ಬಂದ ವೇಳೆ ಪೊಲೀಸ್​ ಅಧಿಕಾರಿಯೊಬ್ಬರು ಇವರನ್ನು ತಡೆದಿದ್ದಾರೆ. ಬಳಿಕ ಅವರ ಕೈಯಲ್ಲಿದ್ದ ಭಾರತ ಧ್ವಜವನ್ನು ಕಿತ್ತು ಪಕ್ಕದಲ್ಲಿದ್ದ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಪೊಲೀಸ್​ ಅವರ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ವಾಕ್ಸಮರ ನಡೆಸಿದರು. ವಿಡಿಯೊ ಮಾಡುತ್ತಿರುವುದನ್ನು ಕಂಡ ಈ ಪೊಲೀಸ್​ ಅಧಿಕಾರಿ ತಾನು ಕಸದ ಬುಟ್ಟಿಗೆ ಎಸೆದ ಧ್ವಜವನ್ನು ತಕ್ಷಣ ಎತ್ತಿಕೊಂಡು ತಮ್ಮ ವಾಹನದಲ್ಲಿ ಇಟ್ಟಿದ್ದಾರೆ.

ಇದನ್ನೂ ಓದಿ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಹಮಾಸ್ ಉಗ್ರರ ಪ್ರಮುಖ ಬೇಡಿಕೆ; ಪತ್ರದಲ್ಲಿದೆ ಕಳಕಳಿಯ ಮನವಿ

ತನಿಖೆಗೆ ಆದೇಶ

ಘಟನೆಯ ವಿಡಿಯೊ ವೈರಲ್​ ಆಗುತ್ತಿದ್ದಂತೆ ಅಧಿಕಾರಿಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಧಿಕಾರಿಯು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲ್ಲಿನ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಶೀಘ್ರವಾಗಿ ವಿಸ್ತೃತ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಈ ಪಂದ್ಯಕ್ಕೆ ನಾವು ಬಾವುಟಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಭಂಧಿಸಿಲ್ಲ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಇಲ್ಲಿನ ಆಡಳಿತರೂಢ ಡಿಎಂಕೆ ವಿರುದ್ಧ ಸನಾತನ ಮತ್ತು ಹಿಂದೂ ವಿರೋಧಿಯ ಆರೋಪಗಳು ಕೇಳಿಬರುತ್ತಿರುವ ಮಧ್ಯೆ ಇದೀಗ ಇಲ್ಲಿನ ಪೊಲೀಸರು ತಿರಂಗಾಕ್ಕೆ ಅವಮಾನ ಮಾಡಿದ್ದು ಇತರ ರಾಜಕೀಯ ಪಕ್ಷಕ್ಕೆ ಡಿಎಂಕೆ ವಿರುದ್ಧ ಕಿಡಿಕಾರಲು ಆಹಾರವಾಗಿದೆ.

ಕಿಡಿಕಾರಿದ ಅಣ್ಣಾಮಲೈ

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ತಮಿಳುನಾಡು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚೆಪಾಕ್‌ನಲ್ಲಿ ನಡೆದ ಪಂದ್ಯಕ್ಕೆ ಭಾರತೀಯ ಧ್ವಜವನ್ನು ಕೊಂಡೊಯ್ಯಲು ಕ್ರೀಡಾಂಗಣದ ಹೊರಗೆ ಪೊಲೀಸರು ಅಭಿಮಾನಿಗಳಿಗೆ ಏಕೆ ಅವಕಾಶ ನೀಡಲಿಲ್ಲ. ಟಿಎನ್‌ಸಿಎಗೆ ಈ ಹಕ್ಕನ್ನು ನೀಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ. ಇದು ಪಾಕಿಸ್ತಾನ ಅಲ್ಲ ಭಾರತ ಎಂದು ಗುಡುಗಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೆ ಅವಕಾಶ ನೀಡದ ಬೆಂಗಳೂರು ಪೊಲೀಸ್​

ಅಕ್ಟೋಬರ್​ 20 ರಂದು ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಕಪ್​ (ICC World Cup 2023) ಪಂದ್ಯದ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾಗ ಇದನ್ನು ಇಲ್ಲಿನ ಪೊಲೀಸರು ವಿರೋಧಿಸಿದ್ದರು. ಯಾವುದೇ ಕಾರಣಕ್ಕೂ ನೀನು ಈ ಘೋಷಣೆ ಕೂಗಬಾರದು. ಬೇಕಿದ್ದರೆ ಭಾರತ್​ ಮಾತಾಕಿ ಜಿಂದಾಬಾದ್​ ಎಂದು ಹೇಳು ಎಂದು ಹೇಳಿದ್ದರು. ಇದೇ ವಿಚಾರವಾಗಿ ಪಾಕಿಸ್ತಾನ ಅಭಿಮಾನಿ ಹಾಗೂ ಈ ಪೊಲೀಸ್​ ಅಧಿಕಾರಿ ನಡುವೆ ವಾಗ್ವಾದ ನಡೆದಿತ್ತು. ಇದರ ವಿಡಿಯೊ ಎಲ್ಲಡೆ ವೈರಲ್​ ಆಗಿತ್ತು. ಪೊಲೀಸ್​ ಅಧಿಕಾರಿಯ ಈ ನಡೆಯ ಬಗ್ಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು.

Exit mobile version