Site icon Vistara News

IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

Suryakumar yadav

ಬೆಂಗಳೂರು: ವಿಶ್ವ ಕಪ್​ ಮುಗಿದ ಬೆನ್ನಲ್ಲೇ ನವೆಂಬರ್​ 23ರಿಂದ ಪ್ರವಾಸಿ ಆಸ್ಟ್ರೇಲಿಯಾ (IND vs AUS) ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಭಾರತ ತಂಡವನ್ನು ಸೋಮವಾರ ಸಂಜೆಯ ವೇಳೆಗೆ ಪ್ರಕಟಿಸಲಾಗಿದೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್​ ಯಾದವ್​ ತಂಡದ ನಾಯಕರಾಗಿ ಆಯ್ಕೆಗೊಂಡಿದ್ದಾರೆ. ತಂಡ ಪ್ರಕಟಿಸಿರುವ ಮಾಹಿತಿಯನ್ನು ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ನೀಡಿದೆ.

ವಿಶ್ವ ಕಪ್​ನಲ್ಲಿ ಆಡಿರುವ ಭಾರತ ತಂಡದ ಎಲ್ಲ ಹಿರಿಯ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಶಾನ್ ಕಿಶನ್​ ಮತ್ತು ಸೂರ್ಯಕುಮಾರ್​ಗೆ ಅವಕಾಶ ದೊರಕಿದೆ. ಕನ್ನಡಿಗ ಹಾಗೂ ವೇಗದ ಬೌಲರ್​ ಪ್ರಸಿದ್ಧ್​ ಕೃಷ್ಣ ಬೌಲಿಂಗ್ ವಿಭಾಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಏಷ್ಯನ್ ಗೇಮ್ಸ್​ನ ಕ್ರಿಕೆಟ್​ ತಂಡದ ನಾಯಕತ್ವ ವಹಿಸಿದ್ದ ಋತುರಾಜ್ ಗಾಯಕ್ವಾಡ್​ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಅದೇ ರೀತಿ ಶರೇಯಸ್​ ಅಯ್ಯರ್​ ಕೊನೇ ಎರಡು ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅ ಅವಧಿಯಲ್ಲಿ ಶ್ರೇಯಸ್​ ಉಪನಾಯಕನ ಸ್ಥಾನ ಪಡೆದುಕೊಳ್ಳಲಿದ್ದಾರೆ.

ವಿಶಾಖಪಟ್ಟಣಂನಲ್ಲಿ ನವೆಂಬರ್ 12ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಐರ್ಲೆಂಡ್ ಸರಣಿಯ ಬಹುಪಾಲು ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಏತನ್ಮಧ್ಯೆ, ಆ ಸರಣಿಯ ನಾಯಕ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ಸೂರ್ಯಕುಮಾರ್ ದೇಶೀಯ ಮಟ್ಟದಲ್ಲಿ ಮುಂಬೈ ತಂಡವನ್ನು ಮತ್ತು ಕೆಲವು ವರ್ಷಗಳ ಹಿಂದೆ ಎಮರ್ಜಿಂಗ್ ಕಪ್​ನಲ್ಲಿ ಭಾರತ ಅಂಡರ್ -23 ತಂಡವನ್ನು ಮುನ್ನಡೆಸಿದ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕಿತ ಟಿ 20 ಬ್ಯಾಟರ್​ ಈ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ : Virat kohli : ಪುತ್ರಿಯ ಫೋಟೊ ತೆಗೆದವನ ಮೇಲೆ ಕಿರುಚಾಡಿ ರೇಗಿದ ಕೊಹ್ಲಿ, ವಿಡಿಯೊ ವೈರಲ್​​

ನವೆಂಬರ್ 23 ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗಿ ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ -20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿವಿಎಸ್ ಲಕ್ಷ್ಮಣ್ ಈ ಸರಣಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಶ್ರೇಯಸ್​ಗೆ ನಾಯಕತ್ವದ ಯೋಜನೆ

ಅಹ್ಮದಾಬಾದ್​ನಲ್ಲಿ ಸಭೆ ಸೇರಿದ ರಾಷ್ಟ್ರೀಯ ತಂಡದ ಆಯ್ಕೆದಾರರು ಈ ಹಿಂದೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕತ್ವಕ್ಕೆ ಪರಿಗಣಿಸಿದ್ದರು. ಆದಾಗ್ಯೂ, ಏಷ್ಯಾ ಕಪ್ನಿಂದ ಪ್ರಾರಂಭಿಸಿ ಇತ್ತೀಚಿನ ತಿಂಗಳುಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್​ ಹೆಗಲ ಮೇಲೆ ಹೊತ್ತಿರುವ ಕೆಲಸದ ಹೊರೆಯ ಕಳವಳಗಳನ್ನು ವ್ಯಕ್ತಪಡಿಸಿ ಯೋಜನೆಗಳನ್ನು ಬದಲಾಯಿಸಿದರು.

ವಿವಿಎಸ್ ಲಕ್ಷ್ಮಣ್ ಅವರನ್ನು ತರಬೇತುದಾರರಾಗಿ ನೇಮಕ ಮಾಡಿರುವ ಮೂಲಕ ಮೂರು ತಿಂಗಳ ಕಠಿಣ ಕೆಲಸದ ನಂತರ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಧಿಕೃತವಾಗಿ ದ್ರಾವಿಡ್ ಅವರ ಅಧಿಕಾರಾವಧಿ ವಿಶ್ವ ಕಪ್​ನೊಂದಿಗೆ ಕೊನೆಗೊಂಡಿದೆ. ವಿಶ್ವಕಪ್ ಮೇಲೆ ಸಂಪೂರ್ಣವಾಗಿ ಗಮನ ಹರಿಸಿರುವ ದ್ರಾವಿಡ್, ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಇನ್ನೂ ಪ್ರತಿಬಿಂಬಿಸಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್​ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.

Exit mobile version