ತಿರುವನಂತಪುರ : ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಭಾರತ ತಂಡ ಹೊಸ ವಿಶ್ವ ದಾಖಲೆ (World Record) ಬರೆದಿದೆ. ಇಲ್ಲಿನ ಗ್ರೀನ್ಫೀಲ್ಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ (ಜನವರಿ 15) ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 317 ರನ್ಗಳ ಭರ್ಜರಿ ವಿಜಯ ದಾಖಲಿಸಿತು. ಇದು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವ ದಾಖಲೆಯ ವಿಜಯವಾಗಿದೆ. ನ್ಯೂಜಿಲ್ಯಾಂಡ್ ತಂಡವನ್ನು ಈ ಸಾಧನೆಯಲ್ಲಿ ಭಾರತ ಹಿಂದಿಕ್ಕಿದೆ. ಪಂದ್ಯದ ಗೆಲುವಿನೊಂದಿಗೆ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಏಕ ದಿನ ಮಾದರಿಯಲ್ಲಿ ಗರಿಷ್ಠ ರನ್ಗಳ ಅಂತರದ ಗೆಲುವಿನ ದಾಖಲೆಯನ್ನು ನ್ಯೂಜಿಲ್ಯಾಂಡ್ ತಂಡ ಹೊಂದಿತ್ತು. 2008ರಲ್ಲಿ ಐರ್ಲೆಂಡ್ ವಿರುದ್ಧ ಕಿವೀಸ್ ಬಳಗ 290 ರನ್ಗಳ ವಿಜಯ ಸಾಧಿಸಿತ್ತು. ಆ ದಾಖಲೆಯನ್ನು ರೋಹಿತ್ ಶರ್ಮ ನೇತೃತ್ವದ ಭಾರತ ಬಳಗ ಮುರಿದಿದೆ.
ಅಫಘಾನಿಸ್ತಾನ ತಂಡದ ವಿರುದ್ಧ 272 ರನ್ಗಳ ವಿಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನಕ್ಕೆ ಇಳಿಸಿದೆ. 2105ರಲ್ಲಿ ಆಸೀಸ್ ಬಳಗ ಈ ಸಾಧನೆ ಮಾಡಿತ್ತು. ಜಿಂಬಾಬ್ವೆ ವಿರುದ್ಧ 272 ರನ್ಗಳ ವಿಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದ್ದು, ಶ್ರೀಲಂಕಾ ವಿರುದ್ಧವೇ 258 ರನ್ಗಳ ಅಂತರದ ಜಯ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ ಐದನೇ ಸ್ಥಾನದಲ್ಲಿದೆ. ಬರ್ಮುಡಾ ತಂಡವನ್ನು 257 ರನ್ಗಳಿಂದ ಸೋಲಿಸಿರುವ ಭಾರತ ಆರನೇ ಸ್ಥಾನದಲ್ಲಿದೆ.
ಇದನ್ನೂ ಓದಿ | INDvsSL ODI | ಶ್ರೀಲಂಕಾ ವಿರುದ್ಧ ಭಾರತ ತಂಡಕ್ಕೆ ವಿಶ್ವ ದಾಖಲೆಯ 317 ರನ್ ವಿಜಯ; ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ