Site icon Vistara News

ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಗೆ ಕೋಟಿ ಕೋಟಿ ಲಾಭ ತಂದುಕೊಟ್ಟ ಭಾರತ ವಿಕೆಟ್‌ಕೀಪರ್‌

ರಿಷಭ್‌ ಪಂತ್‌

ನವ ದೆಹಲಿ: ಕ್ರಿಕೆಟ್ ಜಗತ್ತಲ್ಲೀಗ ರಿಷಬ್ ಪಂತ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ..ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಸೆಂಚುರಿ ಸಿಡಿಸಿದ ಪಂತ್ ಪವರ್ ಫುಲ್ ಆಟಕ್ಕೆ ಕ್ರಿಕೆಟ್ ದಿಗ್ಗಜರೇ ಶಹಬ್ಬಾಸ್‌ ಹೇಳಿದ್ರು. ಈಗ ಪಂತ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ ಅದು ಏನು ಅಂದ್ರೆ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಏಕದಿನ ಸರಣಿ ಗೆಲ್ಲಿಸಿಕೊಟ್ಟಿದ್ದ ಪಂತ್ ಸಾಹೇಬ್ರು ಈಗ ಆಸ್ಟ್ರೇಲಿಯಾಗೆ ಸಾವಿರಾರು ಕೋಟಿ ಲಾಭ ಮಾಡಿಕೊಟ್ಟಿದ್ದಾರಂತೆ..ಅಯ್ಯೋ ಪಂತ್ ಅವರಿಂದ ಬಿಸಿಸಿಐಗೆ ಲಾಭ ಆಗ್ಬೇಕು. ಆಸ್ಟ್ರೇಲಿಯಾ ಹೇಗೆ ಅಂತ ನೀವು ಪ್ರಶ್ನೆ ಮಾಡಬಹುದು. ಆದ್ರೆ ಅಲ್ಲೇ ಇರೋದು ನೋಡಿ ಇಂಟ್ರೆಸ್ಟಿಂಗ್

ಅಂದಹಾಗೆ ಕ್ರಿಕೆಟ್ ಆಸ್ಟ್ರೇಲಿಯಾ ಇತ್ತಿಚೆಗಷ್ಟೇ ತಾನು ಆತಿಥ್ಯ ವಹಿಸುವ ಟೂರ್ನಿಗಳ ಮೀಡಿಯಾ ರೈಟ್ಸ್‌ಗೆ ಬಿಡ್ಡಿಂಗ್ ಕರ್ದಿತ್ತು…ಈ ಮೀಡಿಯಾ ರೈಟ್ಸ್ ಈಗ ಡಿಸ್ನಿ ಸ್ಟಾರ್ ಪಾಲಾಗಿದೆ. ಬರೋಬ್ಬರಿ 2 ಸಾವಿರ ಕೋಟಿಗೆ ಮೀಡಿಯಾ ರೈಟ್ಸ್‌ ಅನ್ನು ಖರೀದಿ ಮಾಡಿದೆ.…ಡಿಸ್ನಿ ಸ್ಟಾರ್ ಇಷ್ಟು ಮೊತ್ತ ನೀಡೋದಕ್ಕೆ ಕಾರಣ ನಮ್ಮ ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಅಂತೆ…
………………………………………….
ಹೌದು ರಿಷಬ್ ಪಂತ್ ಗಬ್ಬಾ ಇನ್ನಿಂಗ್ಸ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಕೋಟಿ ಕೋಟಿ ಹಣ ಹರಿದುಬರುವಂತೆ ಮಾಡಿದೆ.…ಅದು ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಂತಹ ಟೆಸ್ಟ್ ಸರಣಿ. ಕಾಂಗರೂಗಳ ವಿರುದ್ಧ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿತ್ತು. ಕೊನೆಯ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದರ್ಬಾರ್ ಜೋರಾಗಿತ್ತು. ಅಜೇಯ 89 ರನ್ ಸಿಡಿಸಿದ್ದ ಪಂತ್ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ರು. ಈ ಪಂದ್ಯವನ್ನು ವಿಶ್ವದಾದ್ಯಂತ ಅಭಿಮಾನಿಗಳು ವೀಕ್ಷಿಸಿದ್ರು. ಈ ಪಂದ್ಯದ ನಂತ್ರ ಆಸಿಸ್ ಪಂದ್ಯಗಳ ಡಿಮ್ಯಾಂಡ್ ಕೂಡ ಹೆಚ್ಚಾಗಿತ್ತಂತೆ. ಇದೇ ಕಾರಣಕ್ಕಾಗಿ ಆಸ್ಟ್ರೇಲಿಯಾ ಪಂದ್ಯಗಳ ಮೀಡಿಯಾ ರೈಟ್ಸ್ ಗಾಗಿ ಸಿಕ್ಕಾಪಟ್ಟೆ ಪೈಪೋಟಿ ಏರ್ಪಟ್ಟಿತ್ತು.

ಈಗ ರಿಷಭ್‌ ಪಂತ್ ರ ಆ ಗಬ್ಬಾ ಇನ್ನಿಂಗ್ಸ್‌ನಿಂದಲೇ ಕ್ರಿಕೆಟ್ ಆಸ್ಟ್ರೇಲಿಯಾಗೆ ಕೋಟಿ ಕೋಟಿ ಹಣ ಹರಿದುಬಂದಿದೆ ಅನ್ನೋ ಮಾತು ಕೇಳಿಬರ್ತಿದೆ…ಒಟ್ನಲ್ಲಿ ಟೀಂ ಇಂಡಿಯಾದ ಆಟಗಾರ ಕ್ರಿಕೆಟ್ ಆಸ್ಟ್ರೇಲಿಯಾದ ಅದಷ್ಟವನ್ನೇ ಬದಲಾಯಿದ್ದಾರೆ.

Exit mobile version