Site icon Vistara News

INDvsAUS W | ಕೊನೇ ಪಂದ್ಯದಲ್ಲೂ ಭಾರತದ ವನಿತೆಯರಿಗೆ ಸೋಲು

INDvsAUS W

ಮುಂಬಯಿ : ಪ್ರವಾಸಿ ಆಸ್ಟ್ರೇಲಿಯಾ ಮಹಿಳೆಯ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಸೋಲು 54 ರನ್​ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಸರಣಿಯನ್ನು ಹರ್ಮನ್​ಪ್ರೀತ್​ ಕೌರ್​ ಬಳಗ 4-1 ಅಂತರದಿಂದ ಕಳೆದುಕೊಂಡಿತು. ಎರಡನೇ ಪಂದ್ಯದಲ್ಲಿ ಭಾರತ ತಂಡ ಸೂಪರ್​ ಓವರ್​ ಮೂಲಕ ಜಯ ಸಾಧಿಸಿತ್ತು.

ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಮಂಗಳವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್​ ಜಯಿಸಿದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಿದ ಪ್ರವಾಸಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 196 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡ 20 ಓವರ್​ಗಳಲ್ಲಿ 142 ರನ್​ಗಳಿಗೆ ಆಲ್ಔಟ್ ಆಗಿ ಹೀನಾಯ ಸೋಲು ಕಂಡಿತು.

ಭಾರತ ತಂಡದ ಪರ ದೀಪ್ತಿ ಶರ್ಮ (53) ಅರ್ಧ ಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ, ಉಳಿದ ಆಟಗಾರ್ತಿಯರಿಂದ ಉತ್ತಮ ಬೆಂಬಲ ದೊರೆಯದ ಕಾರಣ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಸ್ಮೃತಿ ಮಂಧಾನ (04), ಶಫಾಲಿ ವರ್ಮ (13), ಹರ್ಲಿನ್​ ದೇವಲ್​ (24), ಹರ್ಮನ್​ಪ್ರೀತ್​ ಕೌರ್ (12), ರಿಚಾ ಘೋಷ್​ (10) ಸಣ್ಣ ಮೊತ್ತಕ್ಕೆ ಸೀಮಿತಗೊಂಡರು.

ಪ್ರವಾಸಿ ಬಳಗದ ಅಬ್ಬರ

ಅದಕ್ಕಿಂದ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭಿಕ ವಿಕೆಟ್​ಗಳನ್ನು ಭಾರತ ತಂಡ ಬೌಲರ್​ಗಳು ಬೇಗನೆ ಉರುಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಆಶ್ಲೇ ಗಾರ್ಡ್ನರ್​ (32 ಎಸೆತಕ್ಕೆ 66) ಹಾಗೂ ಗ್ರೇಸ್​ ಹ್ಯಾರಿಸ್ (35 ಎಸೆತಕ್ಕೆ 64) ಸ್ಫೋಟಕ ಪ್ರದರ್ಶನ ನೀಡಿದರು. ಹೀಗಾಗಿ ಬೃಹತ್​ ಮೊತ್ತವನ್ನು ಪೇರಿಸಿ ಭಾರತ ತಂಡದ ಸೋಲಿಗೆ ಕಾರಣರಾದರು.

ಇದನ್ನೂ ಓದಿ | INDvsAUS W | ಆಸ್ಟ್ರೇಲಿಯಾ ವನಿತೆಯರಿಗೆ ತಲೆಬಾಗಿದ ಭಾರತ ತಂಡ; ಸರಣಿಯಲ್ಲೂ ಸೋಲು

Exit mobile version