Site icon Vistara News

Asian Games 2023 : ಭಾರತದ ಕುಸ್ತಿ ತಂಡ ಪ್ರಕಟ; ಯಾರಿಗೆಲ್ಲ ಸಿಕ್ತು ಟಿಕೆಟ್​?

Bajarang Punia

Bajarang Punia got ticket for asian Games

ನವ ದೆಹಲಿ: ಚೀನಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯನ್​ ಗೇಮ್ಸ್​ಗೆ ಭಾರತದ ಕುಸ್ತಿಪಟುಗಳು ತಂಡ ಪ್ರಕಟಗೊಂಡಿದೆ. ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ದೀಪಕ್ ಪೂನಿಯಾ ಮುಂಬರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಪುರುಷರ ಕುಸ್ತಿ ತಂಡವನ್ನು ಮುನ್ನಡೆಸಲಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಯ್ಕೆ ಟ್ರಯಲ್ಸ್​ನಲ್ಲಿ ದೀಪಕ್ ಪೂನಿಯಾ 86 ಕೆ.ಜಿ ವಿಭಾಗವನ್ನು ಗೆಲ್ಲುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಏತನ್ಮಧ್ಯೆ ಬಜರಂಗ್ ಆಯ್ಕೆ ಟ್ರಯಲ್ಸ್​ನಿಂದ ವಿನಾಯಿತಿ ನೀಡಲಾಗಿತ್ತು. ಅಚ್ಚರಿಯೆಂದರೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಟ್ರಯಲ್ಸ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಏಷ್ಯನ್ ಗೇಮ್ಸ್ ಗಾಗಿ ಆಯೋಜಿಸಿದ್ದ ಎರಡು ದಿನಗಳ ಟ್ರಯಲ್ ಭಾನುವಾರ ಮುಕ್ತಾಯಗೊಂಡಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್​ಗೆ ಪುರುಷರ, ಮಹಿಳಾ ಮತ್ತು ಗ್ರೀಕೋ-ರೋಮನ್ ತಂಡಗಳನ್ನು ಅಂತಿಮಗೊಳಿಸಲಾಗಿದೆ. ಗ್ರೀಕೋ-ರೋಮನ್ ವಿಭಾಗದಲ್ಲಿ ಆರು ಮತ್ತು ಮಹಿಳಾ ವಿಭಾಗಗಳಲ್ಲಿ ಐದು ಸೇರಿ ಒಟ್ಟು 11 ಕುಸ್ತಿಪಟುಗಳನ್ನು ಶನಿವಾರ ಆಯ್ಕೆ ಮಾಡಲಾಗಿದೆ.

ಪುರುಷರ ಫ್ರೀಸ್ಟೈಲ್

ಪುರುಷರ ಫ್ರೀಸ್ಟೈಲ್​ನಲ್ಲಿ ಅವಕಾಶ ಪಡೆಯದ ಒಂದು ದೊಡ್ಡ ಹೆಸರು ರವಿ ದಹಿಯಾ ಅವರದ್ದು ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ದಹಿಯಾ ಮೊದಲ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ಅತಿಶ್ ತೋಡ್ಕರ್ ವಿರುದ್ಧ ಸೋಲನುಭವಿಸಿದರು. 57 ಕೆಜಿ ವಿಭಾಗದಲ್ಲಿ ತೋಡ್ಕರ್ ದಹಿಯಾ ಅವರನ್ನು ಮಣಿಸಿ 20-8ರ ಮುನ್ನಡೆ ಸಾಧಿಸಿದರು. ಆದಾಗ್ಯೂ, ತೋಡ್ಕರ್ ಸೆಮಿಫೈನಲ್​​ನಲ್ಲಿ ಸೋತರು. ಅವರನ್ನು ಮಣಿಸಿದ ಅಮನ್ ಶೆರಾವತ್ ಏಷ್ಯನ್ ಗೇಮ್ಸ್​​ನ 57 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ವಿಶಾಲ್ ಕಾಳಿರಾಮನ್ 65 ಕೆ.ಜಿ ವಿಭಾಗದಲ್ಲಿ ಫೈನಲ್ ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದರು. ಬಜರಂಗ್ ಪೂನಿಯಾ ಈಗಾಗಲೇ ಅರ್ಹತೆ ಪಡೆದಿರುವುದರಿಂದ, ಕಾಳಿರಾಮನ್ ಅವರ ಬ್ಯಾಕಪ್ ಸ್ಪರ್ಧಿಯಾಗಿ ಉಳಿಯಲಿದ್ದಾರೆ.

ಇದನ್ನೂ ಓದಿ: Wrestlers Protest: ಕುಸ್ತಿ ಪಟುಗಳ ಪ್ರತಿಭಟನೆ ಬಗ್ಗೆ ಗಂಗೂಲಿ ನೀಡಿದ ಹೇಳಿಕೆಗೆ ನೆಟ್ಟಿಗರ ಆಕ್ರೋಶ

ನಿರೀಕ್ಷೆಯಂತೆ ದೀಪಕ್ ಪೂನಿಯಾ 86 ಕೆ ಜಿ ವಿಭಾಗದ ಫೈನಲ್​​ನಲ್ಲಿ ಜಾಂಟಿಯನ್ನು ಸೋಲಿಸಿ ಗೆದ್ದರು. ಯಶ್, ವಿಕ್ಕಿ ಮತ್ತು ಸುಮಿತ್ ಕ್ರಮವಾಗಿ 74 ಕೆ.ಜಿ, 97 ಕೆ.ಜಿ ಮತ್ತು 125 ಕೆ.ಜಿ ವಿಭಾಗಗಳಲ್ಲಿ ಆಡಲಿದ್ದಾರೆ.

ಪುರುಷರ ಫ್ರೀಸ್ಟೈಲ್ ತಂಡ

ಮಾಜಿ ಏಷ್ಯನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಜ್ಞಾನೇಂದರ್ 60 ಕೆ.ಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಅರ್ಹತೆ ಪಡೆದರು. ನೀರಜ್, ನರೀಂದರ್ ಚೀಮಾ ಮತ್ತು ನವೀನ್ 67 ಕೆ.ಜಿ, 97 ಕೆ.ಜಿ ಮತ್ತು 130 ಕೆ.ಜಿ ವಿಭಾಗಗಳಲ್ಲಿ ಟಿಕೆಟ್​ ಗಿಟ್ಟಿಸಿದ್ದಾರೆ.

ಗ್ರೀಕೋ-ರೋಮನ್

ಮಹಿಳಾ ಫ್ರೀಸ್ಟೈಲ್

ಮಹಿಳೆಯರ ಫ್ರೀಸ್ಟೈಲ್​​ನಲ್ಲಿ ವಿನೇಶ್ ಫೋಗಟ್ ಅವರಿಗೆ 53 ಕೆ.ಜಿ ವಿಭಾಗದಲ್ಲಿ ವಿನಾಯಿತಿ ನೀಡಲಾಯಿತು. ವಿನಾಯಿತಿಯನ್ನು ಪ್ರಶ್ನಿಸಿದ ಅಂತಿಮ್​ ಪಂಗಾಲ್​ ಅದೇ ತೂಕದ ವಿಭಾಗದಲ್ಲಿ ಫೈನಲ್ ಗೆದ್ದರು. 19ರ ಹರೆಯದ ಸೈನಾ ಏಷ್ಯನ್ ಗೇಮ್ಸ್ ನಲ್ಲಿ ವಿನೇಸ್​ಗೆ ಸ್ಟಾಂಡ್​ ಬೈ ಸ್ಪರ್ಧಿಗಳಾಗುತ್ತಾರೆ.

ಮಹಿಳಾ ಫ್ರೀಸ್ಟೈಲ್

Exit mobile version