ದುಬೈ: ನೂತನ ಐಸಿಸಿ ಮಹಿಳೆಯರ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ(Women’s T20 Rankings) ಟೀಮ್ ಇಂಡಿಯಾದ ಆಲ್ರೌಂಡರ್ ದೀಪ್ತಿ ಶರ್ಮ(deepti sharma) ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಸೋಫಿ ಎಕ್‌ಸ್ಟೋನ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ರಸಕ್ತ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಸಾಗುತ್ತಿರುವ ವನಿತೆಯರ ಟಿ20 ತ್ರಿಕೋನ ಸರಣಿಯಲ್ಲಿ 9 ವಿಕೆಟ್ ಉರುಳಿಸಿರುವ ದೀಪ್ತಿ ಶರ್ಮ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ನೆಗೆದಿದ್ದಾರೆ. ಒಂದೊಮ್ಮೆ ಫೈನಲ್ ಪಂದ್ಯದಲ್ಲಿಯೂ ವಿಕೆಟ್ ಬೇಟೆಯಾಡಿದರೆ ಅಗ್ರ ಸ್ಥಾನಕ್ಕೇರುವ ಅವಕಾಶ ಅವರ ಮುಂದಿದೆ.
ಇದನ್ನೂ ಓದಿ Womens T20 Tri-Series: ವನಿತಾ ಟಿ20 ತ್ರಿಕೋನ ಸರಣಿ: ಅಜೇಯ ಓಟ ಮುಂದುವರಿಸಿದ ಟೀಮ್ ಇಂಡಿಯಾ
ಸದ್ಯ ನಂ.1 ಸ್ಥಾನದಲ್ಲಿರುವ ಸೋಫಿ ಎಕ್‌ಸ್ಟೋನ್ ಹಾಗೂ ದೀಪ್ತಿ ಶರ್ಮಾ ನಡುವೆ 26 ಅಂಕಗಳ ಅಂತರವಿದೆ. ದೀಪ್ತಿ 737, ಎಕ್‌ಸ್ಟೋನ್ 763 ಅಂಕ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ನೊಂಕುಲುಲೆಕೊ ಮ್ಲಾಬಾ(732 ಅಂಕ) ಒಂದು ಸ್ಥಾನ ಪ್ರಗತಿ ಕಂಡು 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭಾರತದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ 4 ಸ್ಥಾನಗಳ ಜಿಗಿತ ಕಾಣುವ ಮೂಲಕ 14ನೇ ಸ್ಥಾನ ಅಲಂಕರಿಸಿದ್ದಾರೆ.