ಪ್ಯಾರಿಸ್: ಎಂದಿನಂತೆ ಈ ಸಲವೂ ಒಲಿಂಪಿಕ್ಸ್(Paris Olympics) ಉದ್ಘಾಟನೆಗೆ ಮುನ್ನವೇ ಕೆಲವು ಸ್ಫರ್ದೆಗಳು ಆರಂಭಗೊಂಡಿವೆ. ಫುಟ್ಬಾಲ್ ಮತ್ತು ರಗ್ಬಿ ಬುಧವಾರ ಆರಂಭಗೊಂಡರೆ, ನಾಳೆ(ಗುರುವಾರ) ಹ್ಯಾಂಡ್ಬಾಲ್ ಮತ್ತು ಆರ್ಚರಿ ಸ್ಪರ್ಧೆಗಳು ನಡೆಯಲಿವೆ. ಭಾರತ ಕೂಡ(India’s Schedule At Paris Olympics) ನಾಳೆಯಿಂದ ಸ್ಪರ್ಧೆ ಆರಂಭಿಸಲಿದೆ(India’s July 25 Schedule At Paris Olympics). ಆರ್ಚರಿ ಪಟುಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಒಲಿಂಪಿಕ್ಸ್ ಉದ್ಘಾಟನ ಸಮಾರಂಭ ಜುಲೈ 26ರಂದು ನಡೆಯಲಿದೆ.
ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur) ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಇದನ್ನೂ ಓದಿ Paris Olympics: ಪ್ಯಾರಿಸ್ನಲ್ಲಿ ರಕ್ತದೋಕುಳಿ ಹರಿಸುವುದಾಗಿ ವಿಡಿಯೊ ಮೂಲಕ ಬೆದರಿಕೆ ಹಾಕಿದ ಹಮಾಸ್ ಉಗ್ರರು
27ರಂದು ಹಲವು ಸ್ಪರ್ಧೆ
ಶನಿವಾರದಂದು(ಜುಲೈ 27) ಭಾರತದ ಹಲವು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ವೇಳಾಪಟ್ಟಿ ಇಂತಿದೆ.
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ ಗುಂಪು ಹಂತ: ಎಚ್ ಎಸ್ ಪ್ರಣಯ್, ಲಕ್ಷ್ಯ ಸೇನ್.
ಮಹಿಳೆಯರ ಸಿಂಗಲ್ಸ್ ಗುಂಪು ಹಂತ: ಪಿ.ವಿ ಸಿಂಧು.
ಪುರುಷರ ಡಬಲ್ಸ್ ಗುಂಪು ಹಂತ: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.
ಮಹಿಳೆಯರ ಡಬಲ್ಸ್ ಗುಂಪು ಹಂತ: ತನೀಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12 ಗಂಟೆಯಿಂದ)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್: ಬಾಲರಾಜ್ ಪನ್ವಾರ್. ಆರಂಭ ಮಧ್ಯಾಹ್ನ 12:30 ರಿಂದ
ಶೂಟಿಂಗ್
10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30
10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)
10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ
10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)
ಟೆನಿಸ್; ಮೊದಲ ಸುತ್ತಿನ ಪಂದ್ಯಗಳು
ಪುರುಷರ ಸಿಂಗಲ್ಸ್: ಸುಮಿತ್ ನಗಾಲ್.
ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ. (ಮಧ್ಯಾಹ್ನ 3:30 ರಿಂದ)
ಟೇಬಲ್ ಟೆನ್ನಿಸ್
ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ
ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)
ಬಾಕ್ಸಿಂಗ್
ಮಹಿಳೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್, 32ರ ಸುತ್ತು. (ಸಂಜೆ 7 ರಿಂದ)
ಹಾಕಿ
ಪುರುಷರ ಗುಂಪು ‘ಬಿ’: ಭಾರತ ಮತ್ತು ನ್ಯೂಜಿಲ್ಯಾಂಡ್. (ರಾತ್ರಿ 9 ಗಂಟೆಗೆ)