ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC RANKING) ಟಿ೨೦ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ಏಕೈಕ ಬ್ಯಾಟ್ಸ್‌ಮನ್ ಮಾತ್ರ ಅಗ್ರ ೧೦ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಬಡ್ತಿ ಸಿಕ್ಕಿಲ್ಲ. ಹಿಂದಿನ ಸ್ಥಾನವನ್ನೇ ಕಾಪಾಡಿಕೊಂಡಿದ್ದಾರೆ.
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಟಾಪ್ ೧೦ನಲ್ಲಿ ಅವಕಾಶ ಪಡೆದುಕೊಂಡವರು. ಕಳೆದ ಬಾರಿ ಐಸಿಸಿ Ranking ಪಟ್ಟಿ ಬಿಡುಗಡೆಯಾಗಿದ್ದ ವೇಳೆ ಅವರಿಗೆ 2ನೇ ಸ್ಥಾನ ಲಭಿಸಿತ್ತು. ಅದೇ ಸ್ಥಾನವನ್ನು ಅವರು ಉಳಿಸಿಕೊಂಡಿದ್ದಾರೆ. ಅದೇ ವೇಳೆ ಮತ್ತೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಆರು ಸ್ಥಾನಗಳನ್ನು ಬಡ್ತಿ ಪಡೆದುಕೊಂಡು ೧೯ನೇ ಸ್ಥಾನಕ್ಕೇ ಏರಿದ್ದಾರೆ. ಪಾಕಿಸ್ಥಾನದ ಬಾಬರ್ ಅಜಮ್ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಬಾಬರ್ ಅಜಮ್ ಒಟ್ಟಾರೆ ೮೧೮ ರೇಟಿಂಗ್ಸ್ ಅಂಕಗಳನ್ನು ಹೊಂದಿದ್ದರೆ, ಸೂರ್ಯಕುಮಾರ್ ಯಾದವ್ ೮೦೫ ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೊಹಮ್ಮದ್ ರಿಜ್ಞಾನ್ ೭೯೪ ರೇಟಿಂಗ್ಸ್ ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್ ೭೯೨ ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಡೇವಿಡ್ ಮಲಾನ್ ೭೩೧ ರೇಟಿಂಗ್ ಅಂಕಗಳೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ೫೭೮ ರೇಟಿಂಗ್ಸ್ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಭಾರತದ ಯುವ ಬೌಲರ್ ೫೦ ಸ್ಥಾನ ಬಡ್ತಿ ಪಡೆದುಕೊಂಡಿದ್ದು, ೪೪ನೇ ಸ್ಥಾನಕ್ಕೆ ಏರಿದ್ದಾರೆ. ಕುಲ್ದೀಪ್ ಯಾದವ್ ೫೮ ಸ್ಥಾನಗಳನ್ನು ಬಡ್ತಿ ಪಡೆದುಕೊಂಡಿದ್ದು, ೮೭ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Team India | ಬೆಂಚ್ ಸ್ಟ್ರೆಂಥ್ ಬಲಗೊಳಿಸುವುದೇ ನಮ್ಮ ಗುರಿ ಎಂದ ಟೀಮ್ ಇಂಡಿಯಾ ನಾಯಕ