Site icon Vistara News

CWG-2022 | ಘೋಷಾಲ್‌, ಪಲ್ಲಿಕಲ್‌ಗೆ ಕಂಚಿನ ಪದಕ

CWG- 2022

ಬರ್ಮಿಂಗ್ಹಮ್‌: ಭಾರತದ ಸ್ಕ್ವಾಷ್‌ ಮಿಶ್ರ ಡಬಲ್ಸ್‌ ಜೋಡಿ ಸೌರವ್ ಘೋಷಾಲ್‌ ಹಾಗೂ ದೀಪಿಕಾ ಪಲ್ಲಿಕಲ್ ಕಾಮನ್ವೆಲ್ತ್ ಗೇಮ್ಸ್ (CWG- 2022) ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಜೋಡಿ ಆಸ್ಟ್ರೇಲಿಯಾದ ಡೊನ್ನಾ ಲೊಬಾನ್‌ ಹಾಗೂ ಕ್ಯಾಮೆರೂನ್‌ ಪಿಲ್ಲೆ ಜೋಡಿಯನ್ನು ಮಣಿಸಿ ಪದಕ ಗೆದ್ದುಕೊಂಡಿತು.

ಆಸೀಸ್‌ ಆಟಗಾರರ ಮುಂದೆ ಪಾರಮ್ಯ ಸಾಧಿಸಿದ ಭಾರತದ ಘೋಷಾಲ್‌- ಪಲ್ಲಿಕಲ್‌ ಜೋಡಿ ೨-೦ ಅಂತರದಿಂದ ಜಯ ಸಾಧಿಸಿ ಕಂಚು ತನ್ನದಾಗಿಸಿಕೊಂಡಿತು. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಈ ಜೋಡಿ ಸುಲಭ ಜಯಕ್ಕೆ ಪಾತ್ರವಾಯಿತು.

Exit mobile version