Site icon Vistara News

Englad Tour: ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಪ್ರಕಟ, ನಾಯಕ ಯಾರು?

england Tour

,ಮುಂಬಯಿ: ಇಂಗ್ಲೆಂಡ್‌ ಪ್ರವಾಸದಲ್ಲಿರುವ (Englad Tour) ಭಾರತ ತಂಡ, ಮರು ನಿಗದಿಯಾಗಿರುವ ಟೆಸ್ಟ್‌ ಪಂದ್ಯ ಮುಗಿದ ಬಳಿಕ ತಲಾ ಮೂರು ಟಿ೨೦ ಹಾಗೂ ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳನ್ನಾಡಲಿರುವ ಭಾರತ ತಂಡವನ್ನು ಬಿಸಿಸಿಐನ ಹಿರಿಯರ ತಂಡದ ಆಯ್ಕೆ ಸಮಿತಿ ಗುರುವಾರ ಪ್ರಕಟಿಸಿದೆ. ಕೋವಿಡ್‌-೧೯ ಹಿನ್ನೆಲೆಯಲ್ಲಿ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲು ವಿಫಲಗೊಂಡಿರುವ ರೋಹಿತ್‌ ಶರ್ಮ ಎರಡೂ ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ.

ಜುಲೈ ೧ರಿಂದ ಆರಂಭಗೊಂಡ ಟೆಸ್ಟ್‌ ಪಂದ್ಯ ಜುಲೈ ೫ರವರೆಗೆ ನಡೆಯಲಿದ್ದು, ೭ರಿಂದ ಮೂರು ಪಂದ್ಯಗಳ ಟಿ೨೦ ಸರಣಿ ಹಾಗೂ ೧೨ರಿಂದ ಅಷ್ಟೇ ಸಂಖ್ಯೆಯ ಪಂದ್ಯಗಳ ಏಕದಿನ ಸರಣಿ ಆಯೋಜನೆಗೊಂಡಿದೆ. ಅಂತೆಯೇ ಮೊದಲ ಟಿ೨೦ ಪಂದ್ಯಕ್ಕೆ ಹಾಗೂ ಉಳಿದೆರಡು ಪಂದ್ಯಗಳಿಗೆ ಪ್ರತ್ಯೇಕ ತಂಡ ಘೋಷಿಸಲಾಗಿದೆ. ಮೂರು ಏಕದಿನ ಪಂದ್ಯಗಳಿಗೆ ಮತ್ತೊಂದು ತಂಡ ಪ್ರಕಟಿಸಲಾಗಿದೆ.

ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪರ ಮಿಂಚಿದ್ದ ಅರ್ಶ್‌ದೀಪ್‌ ಸಿಂಗ್‌ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ೨೦ ಸರಣಿ ಹಾಗೂ ಐರ್ಲೆಂಡ್‌ ಪ್ರವಾಸದ ಟಿ೨೦ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರೂ ೧೧ರ ಬಳಗಕ್ಕೆ ಆಯ್ಕೆಯಾಗಿರಲಿಲ್ಲ. ಇದೀಗ ಮತ್ತೆ ಇಂಗ್ಲೆಂಡ್‌ ವಿರುದ್ಧದ ಟಿ೨೦ ಸರಣಿಗೆ ಆಯ್ಕೆಯಾಗಿದ್ದು, ೧೧ರ ಬಳಗಕ್ಕೆ ಹೊಂಚು ಹಾಕುತ್ತಿದ್ದಾರೆ. ಅತ್ತ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್‌ ಮಲಿಕ್‌ ಕೂಡ ಟಿ೨೦ ಸರಣಿಗೆ ಆಯ್ಕೆಗೊಂಡಿದ್ದಾರೆ. ಅಂತೆಯೇ ಐರ್ಲೆಂಡ್‌ಗೆ ಪ್ರವಾಸ ಮಾಡಿದ್ದ ನಿಯೋಗದಲ್ಲಿ ಅವಕಾಶ ಪಡೆದುಕೊಂಡಿದ್ದರೂ ಆಡುವ ಬಳಗಕ್ಕೆ ಸೇರ್ಪಡೆಯಾಗದ ರಾಹುಲ್‌ ತ್ರಿಪಾಠಿ ಕೂಡ ಟಿ೨೦ ತಂಡದಲ್ಲಿ ಉಳಿದಿದ್ದಾರೆ.

ಮೊದಲ ಟಿ೨೦ ಪಂದ್ಯದ ತಂಡ: ರೋಹಿತ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಾಹುಲ್‌ ತ್ರಿಪಾಠಿ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ವೆಂಕಟೇಶ್‌ ಅಯ್ಯರ್‌, ಯಜ್ವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌, ಅರ್ಶ್‌ದೀಪ್‌ ಸಿಂಗ್‌, ಉಮ್ರಾನ್‌ ಮಲಿಕ್‌.

೨ ಮತ್ತು ೩ನೇ ಟಿ೨೦: ರೋಹಿತ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ಶ್ರೇಯಸ್‌ ಅಯ್ಯರ್‌, ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಯಜ್ವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ, ಜಸ್‌ಪ್ರಿತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಆವೇಶ್‌ ಖಾನ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌.

ಏಕದಿನ ತಂಡ: ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದುಲ್‌ ಠಾಕೂರ್‌, ಯಜ್ವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಜಸ್‌ಪ್ರಿತ್‌ ಬುಮ್ರಾ, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಅರ್ಶ್‌ದೀಪ್‌ ಸಿಂಗ್‌.

ಇದನ್ನೂ ಓದಿ: IND vs SA 3rd T2O | ಟೀಮ್‌ ಇಂಡಿಯಾ ಐದು ವಿಕೆಟ್‌ಗೆ 179 ರನ್‌

Exit mobile version