Site icon Vistara News

Smriti Mandhana | ಮಿಥಾಲಿ ರಾಜ್ ದಾಖಲೆ ಮುರಿದ ಭಾರತದ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಾ

RCB captain Smriti Mandhana took responsibility for the defeat

ಲಂಡನ್‌ : ಭಾರತ ಮಹಿಳೆಯರ ತಂಡದ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಾ (Smriti Mandhana) ಅವರು ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದ್ದು, ಇದೀಗ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಏಕ ದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ೯೧ ರನ್‌ ಬಾರಿಸಿದ್ದ ಸ್ಮೃತಿ, ಎರಡನೇ ಹಣಾಹಣಿಯಲ್ಲೂ ೪೦ ರನ್‌ ಗಳಿಸಿದ್ದಾರೆ. ಇದೇ ವೇಳೆ ಅವರು ಏಕ ದಿನ ಮಾದರಿಯಲ್ಲಿ ೩೦೦೦ ರನ್‌ಗಳ ಗಡಿ ದಾಟಿದ್ದಾರೆ. ಇದೇ ವೇಳೆ ಅವರು ಭಾರತ ಮಹಿಳೆಯರ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಅವರ ಹೆಸರಿನಲ್ಲಿದ್ದ ಭಾರತ ಪರ ದಾಖಲೆಯೊಂದನ್ನು ಮುರಿದಿದ್ದಾರೆ.

ಸ್ಮೃತಿ ಮಂಧಾನಾ ೭೬ ಇನಿಂಗ್ಸ್‌ಗಳಲ್ಲಿ ೩೦೦೦ ರನ್‌ಗಳ ಗಡಿ ದಾಟಿದ್ದು, ಈ ಮೂಲಕ ಮಿಥಾಲಿ ರಾಜ್‌ ಅವರು ೮೮ ಇನಿಂಗ್ಸ್‌ಗಳಲ್ಲಿ ಮಾಡಿದ್ದ ಭಾರತ ಪರ ದಾಖಲೆಯನ್ನು ಮುರಿದರು. ಇದೇ ವೇಳೆ ಅವರು ಭಾರತ ಪರ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಮೂರನೇ ಕ್ರಿಕೆಟರ್‌ ಎನಿಸಿಕೊಂಡರು. ಪುರುಷ ಕ್ರಿಕೆಟಿಗರಾದ ಶಿಖರ್‌ ಧವನ್‌ (೭೨ ಇನಿಂಗ್ಸ್‌) ವಿರಾಟ್‌ ಕೊಹ್ಲಿ (೭೫ಇನಿಂಗ್ಸ್‌ಗಳಲ್ಲಿ) ೩ ಸಹಸ್ರ ರನ್‌ಗಳ ದಾಖಲೆ ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ಈ ಎಡಗೈ ಬ್ಯಾಟರ್‌ ೨೦೧೩ರಲ್ಲಿ ಏಕ ದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. ಅವರ ೭೬ ಇನಿಂಗ್ಸ್‌ಗಳಲ್ಲಿ ಐದು ಶತಕ ಹಾಗೂ ೨೪ ಅರ್ಧ ಶತಕವಿದೆ. ಬ್ಯಾಟಿಂಗ್‌ನಲ್ಲಿ ಅವರು ೪೩ ಪ್ಲಸ್‌ ಸರಾಸರಿ, ೮೫ ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಈ ೩೦೦೦ ರನ್‌ಗಳ ಸಾಧನೆ ಮಾಡಿದ್ದಾರೆ.

ಜಾಗತಿಕ ಮಹಿಳಾ ಕ್ರಿಕೆಟ್‌ನಲ್ಲಿ ೨೨ ಆಟಗಾರ್ತಿಯರು ೩ ಏಕ ದಿನ ರನ್‌ಗಳ ಸಾಧನೆ ಮಾಡಿದ್ದಾರೆ. ಈ ಗುರಿಯನ್ನು ಅತಿ ವೇಗದಲ್ಲಿ ಮುಟ್ಟಿದವರಲ್ಲಿ ಮಂಧಾನಾ ಮೂರನೆಯವರು. ಬೆಲಿಂಡಾ ಕ್ಲಾರ್ಕ್‌ (೬೨ ) ಹಾಗೂ ಮೆಗ್‌ ಲ್ಯಾನಿಂಗ್‌ (೬೪) ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Team India | ಆಂಗ್ಲರ ನಾಡಲ್ಲಿ ಅಬ್ಬರಿಸಿದ ಭಾರತದ ವನಿತೆಯರಿಂದ ಎರಡು ದಶಕದ ಬಳಿಕ ನೂತನ ದಾಖಲೆ

Exit mobile version