ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ (INDvsAUS) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದ್ದು ಮೊದಲು ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮೊದಲು ಹಲವು ಚರ್ಚೆಗಳು ಆರಂಭಗೊಂಡಿವೆ. ಏತನ್ಮಧ್ಯೆ, ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಭಾರತದಲ್ಲಿ ಅಭ್ಯಾಸ ಪಂದ್ಯ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಭ್ಯಾಸ ಪಂದ್ಯಕ್ಕೆ ನಮಗೆ ಹೆಚ್ಚು ಹುಲ್ಲು ಹೊಂದಿರುವ ಪಿಚ್ ನೀಡಲಾಗಿತ್ತು. ಪಂದ್ಯದಲ್ಲಿ ನೀಡಿದ ಪಿಚ್‌ಗಳಿಗೂ ಅಭ್ಯಾಸದಲ್ಲಿ ಒದಗಿಸಿದ್ದ ಪಿಚ್‌ಗಳಿಗೆ ಒಂದಕ್ಕೊಂದು ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನಮ್ಮದೇ ನೆಟ್ಸ್ ಅಭ್ಯಾಸ ಕೈಗೊಳ್ಳುವುದೇ ಉತ್ತಮ. ಆಗ ಸಾಧ್ಯವಾದಷ್ಟು ಹೆಚ್ಚು ಸ್ಪಿನ್ನರ್‌ಗಳನ್ನು ಎದುರಿಸಬಹುದು. ಹೀಗಾಗಿ ಈ ಬಾರಿ ಅಭ್ಯಾಸ ಪಂದ್ಯಗಳನ್ನು ಆಡದೇ ಇರುವ ನಿರ್ಧಾರ ಮಾಡಿರುವುದು ಸರಿಯಾಗಿದೆ” ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಹಿಂದೆ ಭಾರತಕ್ಕೆ ಪ್ರವಾಸ ಮಾಡಿರುವ ವೇಳೆ ಅಲ್ಲಿನ ಪಿಚ್ ಬಗ್ಗೆ ಅರಿತುಕೊಂಡಿದ್ದೇವೆ. ಹೀಗಾಗಿ ಈ ಬಾರಿ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡದೇ ಇರಲು ನಿರ್ಧರಿಸಿದ್ದೇವೆ. ಆದ್ದರಿಂದಲೇ ಸರಣಿ ಆರಂಭಕ್ಕೆ ಇನ್ನೊಂದು ವಾರ ಇರುವಾಗ ಭಾರತಕ್ಕೆ ತೆರಳಲಿದ್ದೇವೆ. ಅತಿಯಾದ ಅಭ್ಯಾಸ ಮಾಡದೇ ಇರಲು ನಿರ್ಧರಿಸಿದ್ದೇವೆ,” ಎಂದು ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿಕೆ ನೀಡಿದ್ದರು.
ಇದನ್ನೂ ಓದಿ | Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!