ಅಹ್ಮದಾಬಾದ್: ಅಕ್ಟೋಬರ್ 5ರಂದು ಅಹ್ಮದಾಬಾದ್ನಲ್ಲಿ ಏಕ ದಿನ ವಿಶ್ವ ಕಪ್ನ ಉದ್ಘಾಟನಾ ಸಮಾರಂಭ ನಡೆದಿತ್ತು. ಈ ಪಂದ್ಯಕ್ಕೂ ಮುನ್ನ ಮನೋರಂಜನಾ ಕಾರ್ಯಕ್ರಮಗಳು ಇರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದರು.ಆದರೆ ಬಿಸಿಸಿಐ ಅವರೆಲ್ಲರಿಗೂ ನಿರಾಸೆ ಮೂಡಿಸಿತ್ತು. ಯಾವುದೇ ಕಾರ್ಯಕ್ರಮ ಆಯೋಜಿಸದೇ ಖಾಲಿ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಉದ್ಘಾಟನಾ ಪಂದ್ಯವನ್ನು ಆಡಿಸಿದ್ದರು. ಇದೀಗ ಬೇಸರಗೊಂಡಿರುವ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಪಡಿಸಲು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಬಿಸಿಸಿಐ ಸಿದ್ದತೆ ಮಾಡಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನ (ind vs pak) ತಂಡಗಳ ನಡುವಿನ ಪಂದ್ಯಕ್ಕೆ ಮೊದಲು ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ಮೊದಲು ಅರಿಜಿತ್ ಸಿಂಗ್ ಸೇರಿದಂತೆ ನಾನಾ ಕಲಾವಿದರಿಂದ ಪಂದ್ಯ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಅರಿಜಿತ್ ಸಿಂಗ್ ಸೇರಿದಂತೆ ಪ್ರಮುಖ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.
ಈ ಸುದ್ದಿಗಳನ್ನು ಓದಿ
ICC World Cup 2023 : ವಿಶ್ವ ಕಪ್ನಲ್ಲಿ ಹೊಸ ದಾಖಲೆ ಬರೆದ ಪಾಕಿಸ್ತಾನ
ICC World Cup 2023 : ಬಿಗ್ ಸ್ಕೋರ್ ಪಂದ್ಯದಲ್ಲಿ ಲಂಕಾ ಮಣಿಸಿದ ಪಾಕ್
ICC World Cup 2023 : ಶತಕಗಳ ಮೇಲೆ ಶತಕ ಬಾರಿಸಿ ಹೊಸ ದಾಖಲೆ ಬರೆದ ಡೇವಿಡ್ ಮಲಾನ್
ಅಕ್ಟೋಬರ್ 5 ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯ ಪ್ರಾರಂಭವಾಗುವ ಮೊದಲು ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಈ ಹಿಂದೆ ಯೋಜಿಸಿತ್ತು. ಆಶಾ ಭೋಂಸ್ಲೆ, ಶಂಕರ್ ಮಹಾದೇವನ್, ಶ್ರೇಯಾ ಘೋಷಾಲ್, ರಣವೀರ್ ಸಿಂಗ್ ಮತ್ತು ತಮನ್ಹಾ ಭಾಟಿಯಾ ಅವರಂತಹ ಕಲಾವಿದರನ್ನು ಅವರು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಬಿಸಿಸಿಐ ಕೊನೆಯ ಕ್ಷಣದಲ್ಲಿ ಲಾಜಿಸ್ಟಿಕ್ ಸಮಸ್ಯೆಯಿಂದಾಗಿ ಉದ್ಘಾಟನಾ ಸಮಾರಂಭ ನಡೆಯಲಿಲ್ಲ. ವಿಶ್ವಕಪ್ ನಂತಹ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸದಿರುವುದಕ್ಕೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಈಗ ವರ್ಣರಂಜಿತ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್, ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ನಾನಾ ಕ್ಷೇತ್ರಗಳ ದಿಗ್ಗಜರು ಹಾಜರಾಗಲಿದ್ದಾರೆ. ಅಲ್ಲದೆ, ಜಯ್ ಶಾ ಅವರ ತಂದೆ ಅಮಿತ್ ಶಾ (ಗೃಹ ಸಚಿವ) ಭವ್ಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ದೈನಿಕ್ ಜಾಗರಣ್ ವರದಿಗಳ ಪ್ರಕಾರ, ಸಮಾರಂಭವು ಮಧ್ಯಾಹ್ನ 12:30 ರ ಸುಮಾರಿಗೆ ಪ್ರಾರಂಭವಾಗಲಿದೆ. ಪಂದ್ಯವು ಮಧ್ಯಾಹ್ನ 2:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂದ್ಯಕ್ಕೂ ಮೊದಲು ಸಮಾರಂಭವನ್ನು ನಡೆಸಲು ಬಿಸಿಸಿಐ ಯೋಜಿಸುತ್ತಿದೆ.
ಬ್ಲೂ ಜೆರ್ಸಿಯಲ್ಲೇ ಪಂದ್ಯ
ಟೀಮ್ ಇಂಡಿಯಾ ಆಟಗಾರರು ಪಾಕ್ ಪಂದ್ಯದಲ್ಲಿ ಕೇಸರಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಸುದ್ದಿಯನ್ನು ಬಿಸಿಸಿಐ ನಿರಾಕರಿಸಿತ್ತು. “ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಇದೊಂದು ದಾರಿ ತಪ್ಪಿಸಲು ಕೆಲ ವ್ಯಕ್ತಿಗಳು ಮಾಡಿರುವ ಸಂಚು. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಮ್ಮ ತಂಡ ಮೆನ್ ಇನ್ ಬ್ಲೂನಲ್ಲೇ ಆಡಲಿದೆ” ಎಂದು ಬಿಸಿಸಿಐನ ಗೌರವ ಖಜಾಂಚಿ ಆಶಿಶ್ ಶೆಲಾರ್ ತಿಳಿಸಿದ್ದಾರೆ.
ಕೇಸರಿ ಶಾಲು ಹಾಕಿ ಸ್ವಾಗತ
ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗ ಹೈದಾರಾಬಾದ್ನಲ್ಲಿ ಪಾಕ್ ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತ ಕೋರಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಕೆಲವರು ಇದು ಅಮಿತ್ ಶಾ ಅವರ ಮಗ ಜಯ್ ಶಾ ಅವರು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂದು ಕೆಲ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. ಇದಕ್ಕೂ ಮುನ್ನ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.