ಜಕಾರ್ತ: ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಮಾಸ್ಟರ್ಸ್(Indonesia Masters) ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್(Lakshya Sen) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್(Saina Nehwal) ಸೋತು ಟೂರ್ನಿಯಿಂದ ಹೊರಬಿದ್ದರು.
ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಲಕ್ಷ್ಯ ಸೇನ್ 19-21, 21-8, 21-17 ಗೇಮ್ಗಳಿಂದ ಮಲೇಷ್ಯಾದ ಎಂಗ್ ತ್ಸೆ ಯೊಂಗ್ ಅವರನ್ನು ಮಣಿಸಿದರು.ಮೊದಲ ಗೇಮ್‌ನಲ್ಲಿ ಸೋತರೂ ಬಳಿಕ ಎರಡು ಗೇಮ್ಗಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಸೇನ್ ಅಂತಿಮವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
Australian Open 2023: ಆಸ್ಟ್ರೇಲಿಯಾ ಓಪನ್; ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ರನ್ನರ್ ಅಪ್
ಮಹಿಳೆಯರ ಸಿಂಗಲ್ಸ್ ವಿಭಾಗದ 16ರ ಘಟ್ಟದಲ್ಲಿ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಚೀನಾದ ಯು ಹಾನ್ ವಿರುದ್ಧ 21-15, 21-7 ನೇರ ಗೇಮ್ಗಳಿಂದ ಶರಣಾದರು. ಕಳೆದ ಕೆಲ ವರ್ಷಗಳಿಂದ ಸೈನಾ ಆಡಿದ ಪ್ರಮುಖ ಟೂರ್ನಿಯಲ್ಲಿ ಕನಿಷ್ಠ ಕ್ವಾರ್ಟರ್ ಫೈನಲ್ಗೂ ಪ್ರವೇಶಿಸಲು ಪರದಾಡುತ್ತಿದ್ದಾರೆ. ಇದೇ ರೀತಿ ಪ್ರದರ್ಶನ ಮುಂದುವರಿಸಿದರೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಲು ವಿಫಲವಾದರೂ ಅಚ್ಚರಿಯಿಲ್ಲ.