ಜಕಾರ್ತಾ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಶಟ್ಲರ್ ಪಿ.ವಿ. ಸಿಂಧು(PV Sindhu) ಅವರ ಕಳಪೆ ಪ್ರದರ್ಶನ ಮತ್ತೆ ಮುಂದುವರಿದಿದೆ. “ಬಿಡ್ಲುಎಫ್ ಇಂಡೋನೇಷ್ಯ ಓಪನ್(Indonesia Open) ಸೂಪರ್ 1000′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಚೈನೀಸ್ ತೈಪೆಯ ಸು ವೆನ್ ಚಿ 21-15, 15-21, 21-14 ಅಂತರದಿಂದ ಸೋಲು ಕಂಡರು. ಇದು ಸು ವೆನ್ ಚಿ ವಿರುದ್ಧ ಸಿಂಧು ಅನುಭವಿಸಿದ ಮೊದಲ ಸೋಲು.
ಕೆಲ ದಿನಗಳ ಹಿಂದಷ್ಟೇ ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್(Singapore Open) ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿಯೂ ಸಿಂಧು ಎರಡನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಆದರೆ, ಇದಕ್ಕೂ ಮುನ್ನ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸಿಂಧು ದ್ವಿತೀಯ ಸ್ಥಾನಿಯಾಗಿದ್ದರು. ಫೈನಲ್ನಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ 21-16, 5-21, 21-16 ಗೇಮ್ಗಳ ಅಂತರದಿಂದ ಸೋಲು ಕಂಡಿದ್ದರು.
ಇದೇ ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ಆರಂಭಕ್ಕೂ ಮುನ್ನ ಸಿಂಧು ಅವರು ಸೋಲು ಕಂಡಿದ್ದು. ಅವರ ಮೇಲಿನ ಪದಕ ಭರವಸೆಯನ್ನು ಕುಂಠಿತಗೊಳ್ಳುವಂತೆ ಮಾಡಿದೆ. ಸತತವಾಗಿ 2 ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಮಹಿಳಾ ಕ್ರೀಡಪಟು ಎನಿಸಿಕೊಂಡಿರುವ ಸಿಂಧು ಇತ್ತೀಚೆಗೆ ಎಲ್ಲ ಟೂರ್ನಿಯಲ್ಲೂ ವಿಫಲರಾಗಿದ್ದಾರೆ. ಸಿಂಧು ಪ್ಯಾರಿಸ್‌ಗೆ ತೆರಳುವ ಮೊದಲು ಜರ್ಮನಿಯ ಸಾರ್ಬ್ರುಕೆನ್‌ನಲ್ಲಿರುವ ಹರ್ಮನ್-ನ್ಯೂಬರ್ಗರ್ ಸ್ಪೋರ್ಟ್ ಕ್ಲಬ್ನಲ್ಲಿ ತರಬೇತಿ ಪಡೆಯಲಿದ್ದಾರೆ. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ PV Sindhu: ನೂತನ ಕೋಚ್ ಮೊರೆ ಹೋದ ಪಿ.ವಿ. ಸಿಂಧು
French Open 2024: ಸೆಮಿಫೈನಲ್ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ
ಪ್ಯಾರಿಸ್: ಫ್ರೆಂಚ್ ಓಪನ್(French Open 2024) ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ(Rohan Bopanna)-ಮ್ಯಾಥ್ಯೂ ಎಬ್ಡೆನ್(Matthew Ebden) ಕಠಿಣ ಹೋರಾಟದ ಬಳಿಕ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್ನಲ್ಲಿ ಸಿಮೋನ್ ಬೊಲೆಲಿ- ಆಂಡ್ರಿಯಾ ವವಸ್ಸೋರಿ ಜೋಡಿಯ ಸವಾಲು ಎದುರಿಸಲಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಸ್ಯಾಂಡರ್ ಗಿಲ್ಲೆ ಮತ್ತು ಜೊರಾನ್ ವಿಲೆಜೆನ್ ವಿರುದ್ಧ ಮೂರು ಸೆಟ್ಗಳ ಸುದೀರ್ಘ ಹೋರಾಟ ನಡೆಸಿ 7-6 (7-3), 5-7, 6-1 ಅಂತರದ ಗೆಲುವು ಸಾಧಿಸಿದರು. ಈ ಪಂದ್ಯ 2 ಗಂಟೆ 4 ನಿಮಿಷಗಳ ತನಕ ಸಾಗಿತು. ಕಳೆದ ಕೆಲವು ವರ್ಷಗಳಿಂದ ಇಂಡೋ-ಆಸೀಸ್ ಜೋಡಿ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಸೆಮಿಫೈನಲ್(French Open semis) ತಲುಪಿರುವ ಈ ಜೋಡಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.