Site icon Vistara News

INDvsENG t20 : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರ ಸೂರ್ಯಕುಮಾರ್‌

INDvsENG t̄20

ನಾಟಿಂಗ್‌ಹ್ಯಾಮ್‌: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ INDvsENG t20 ಸರಣಿಯ ಮೂರನೇ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಟಿ೨೦ ಮಾದರಿಯಲ್ಲಿ ಶತಕ ಬಾರಿಸಿದ ಭಾರತದ ಐದನೇ ಆಟಗಾರ ಎನಿಸಿಕೊಂಡರು.

೩೧ ವರ್ಷದ ಈ ಬ್ಯಾಟರ್‌ಗೆ ಇದು ಚೊಚ್ಚಲ ಟಿ೨೦ ಶತಕವಾಗಿದೆ. ೪೮ ಎಸೆತಗಳಲ್ಲಿ ಮೂರಂಕಿ ದಾಟಿದ ಅವರು ೫೫ ಎಸೆತಗಳಲ್ಲಿ ೧೧೭ ರನ್‌ ಬಾರಿಸಿದರು. ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಟೀಮ್‌ ಇಂಡಿಯಾ ಸರಣಿಯ ಮೂರನೇ ಪಂದ್ಯದಲ್ಲಿ ೧೭ ರನ್‌ಗಳಿಂದ ಸೋಲು ಕಂಡಿದೆ.

ಸುರೇಶ್‌ ರೈನಾ, ರೋಹಿತ್‌ ಶರ್ಮ, ಕೆ. ಎಲ್.‌ ರಾಹುಲ್‌ ಹಾಗೂ ದೀಪಕ್‌ ಹೂಡಾ ಟಿ೨೦ ಅಂತಾರಾಷ್ಟ್ರಿಯ ಮಾದರಿಯಲ್ಲಿ ಶತಕ ಬಾರಿಸಿದ ಆಟಗಾರರಾಗಿದ್ದಾರೆ.

ಇದನ್ನೂ ಓದಿ : t20 Series : ಹಾರ್ದಿಕ್‌ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು ಕಡಿಮೆ ಮೊತಕ್ಕೆ ಆಲ್‌ಔಟ್‌, ಭಾರತಕ್ಕೆ ಭರ್ಜರಿ ಜಯ

Exit mobile version