Site icon Vistara News

INDvsWI: ಟೆಸ್ಟ್​ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ; ರೋಹಿತ್​ಗೆ ಕೊಕ್​ ಸಾಧ್ಯತೆ

Ajinkya Rahane

ಮುಂಬಯಿ: ಭಾರತ ತಂಡ ಮುಂದಿನ ತಿಂಗಳು ವೆಸ್ಟ್​ ಇಂಡೀಸ್(INDvsWI)​ ಪ್ರವಾಸ ಕೈಗೊಳ್ಳಿದೆ. ಈ ಸರಣಿಯಿಂದ ರೋಹಿತ್​ ಶರ್ಮ(rohit sharma) ಅವರನ್ನು ವಿಶ್ರಾಂತಿ ನೆಪದಲ್ಲಿ ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ರೋಹಿತ್‌ ಅವರನ್ನು ವಿಂಡೀಸ್‌ ಟೆಸ್ಟ್‌ ಸರಣಿಯಿಂದ ಹೊರಗಿರಿಸಿದರೆ ನಾಯಕತ್ವ ಯಾರಿಗೆ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಇದಕ್ಕೆ ಆಯ್ಕೆ ಸಮಿತಿಯ ಬಳಿ ಉತ್ತರವೂ ಇದೆ. ಹೌದು ಅಜಿಂಕ್ಯ ರಹಾನೆ(ajinkya rahane) ಅವರಿಗೆ ಈ ಸರಣಿಯಲ್ಲಿ ಟೆಸ್ಟ್​ ನಾಯಕತ್ವ ನೀಡುವುದು ಖಚಿತವಾಗಿದೆ.

ರಹಾನೆ 2 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದರೂ ಅವರ ಪ್ರದರ್ಶನ ಉತ್ತಮ ಮಟ್ಟದಿಂದ ಕೂಡಿದೆ. ಇದನ್ನೂ ಅವರು ಸಾಭೀತು ಕೂಡ ಪಡಿಸಿದ್ದಾರೆ. ಆಸ್ಟ್ರೇಲಿಯ ಎದುರಿನ ಫೈನಲ್‌ನಲ್ಲಿ ಅವರು ಆಡದೇ ಹೋಗಿದ್ದರೆ ಭಾರತ ತಂಡ ಇನ್ನಷ್ಟು ದೊಡ್ಡ ಅಂತರದಿಂದ ಹೀನಾಯವಾಗಿ ಸೋಲು ಕಾಣುತ್ತಿತ್ತು. ಎರಡೂ ಇನಿಂಗ್ಸ್​ನಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿ ಅವರು ತಂಡಕ್ಕೆ ಆಸರೆಯಾಗಿದ್ದರು.

ಹಿಂದೆ ಆಸ್ಟ್ರೇಲಿಯ ನೆಲದಲ್ಲಿ ಭಾರತ 36 ರನ್​ಗೆ ಕುಸಿದು ಮುಖಭಂಗ ಅನುಭವಿಸಿದ್ದ ಸಂದರ್ಭದಲ್ಲಿ ಹಂಗಾಮಿಯಾಗಿ ತಂಡದ ನಾಯಕತ್ವ ವಹಿಸಿದ ರಹಾನೆ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದು ಬಳಿಕ ಐತಿಹಾಸಿಕ ಸರಣಿ ಗೆಲುವು ತಂದಿತ್ತ ಖ್ಯಾತಿಯೂ ಇವರದ್ದಾಗಿದೆ. ಹೀಗಾಗಿ ಅವರಿಗೆ ನಾಯಕತ್ವ ಸಿಗುವುದು ಪಕ್ಕಾ ಎನ್ನಲಾಗಿದೆ. ಇನ್ನೊಂದೆಡೆ ಅವರ ನಾಯಕತ್ವದಲ್ಲಿ ಭಾರತ ತಂಡ ಇದುವರೆಗೂ ಸೋಲು ಕಂಡಿಲ್ಲ. ರೋಹಿತ್‌ ಜತೆಗೆ ಸೀನಿಯರ್‌ಗಳಾದ ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಶಮಿ ಅವರಿಗೂ ವಿಂಡೀಸ್‌ ಪ್ರವಾಸದ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ ICC World Cup 2023: ವಿಶ್ವ ಕಪ್​ ಅರ್ಹತಾ ಪಂದ್ಯಗಳಿಗೆ ವೇದಿಕೆ ಸಜ್ಜು; 2 ಸ್ಥಾನಕ್ಕೆ 10 ತಂಡಗಳ ಪೈಪೋಟಿ

ಸೀಮಿತ ಓವರ್​ಗೆ ಪಾಂಡ್ಯ ನಾಯಕ

ಸೀಮಿತ ಓವರ್‌ಗಳ ಸರಣಿಗೂ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕವಾಗಿದೆ. ಒಂದೊಮ್ಮೆ ಅವರನ್ನು ಏಕದಿನ ಮತ್ತು ಟಿ20 ಸರಣಿಯಿಂದಲೂ ಕೈ ಬಿಟ್ಟರೆ ಹಾರ್ದಿಕ್‌ ಪಾಂಡ್ಯ(hardik pandya) ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಪಾಂಡ್ಯ ಅವರು ಹಲವು ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದಾರೆ.

Exit mobile version