Site icon Vistara News

INDvsWI: ವಿಂಡೀಸ್​ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ

INDvsWI

ಬೆಂಗಳೂರು: ಭಾರತ ತಂಡ ಮುಂದಿನ ತಿಂಗಳು ವೆಸ್ಟ್​ ಇಂಡೀಸ್(INDvsWI)​ ಪ್ರವಾಸ ಕೈಗೊಳ್ಳಿದೆ. ಈ ಸರಣಿಯಲ್ಲಿ ಅನೇಕ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಈಗಾಗಲೇ ಎಲ್ಲ ಸಿದ್ಧತೆ ನಡೆಸಿದೆ. ಈ ಪಟ್ಟಿಯಲ್ಲಿ ಕೇರಳದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿರುವ ಸಂಜು ಸ್ಯಾಮ್ಸನ್​ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸಂಜು ಸ್ಯಾಮ್ಸನ್​ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಅವರನ್ನು ಆಡುವ ಬಳಗದಲ್ಲಿ ಸೇರಿಕೊಳ್ಳಲಾಗುತ್ತದೆಯೀ ಎನ್ನುವುದು ಅತ್ಯಂತ ಕುತೂಹಲದ ಸಂಗತಿಯಾಗಿದೆ. ಏಕೆಂದರೆ ಭಾರತದ ಹಲವು ಸರಣಿಗಳಲ್ಲಿ ಅವರಿಗೆ ತಂಡದಲ್ಲಿ ಅವಕಾಶ ನೀಡಿದರೂ ಆಡುವ ಬಳಗದಿಂದ ಅವರನ್ನು ದೂರ ಇಟ್ಟಿದ್ದೇ ಹೆಚ್ಚು. ಇದೇ ವಿಚಾರವಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಬಗ್ಗೆ ಹಲವು ಬಾರಿ ಟೀಕೆ ಮತ್ತು ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಕೇವಲ ಒಂದು ಪಂದ್ಯ ಆಡಿಸಿ ಆ ಬಳಿಕದ ಪಂದ್ಯಗಳಿಂದ ಕೈ ಬಿಡಲಾಗುತ್ತಿತ್ತು. ಆದರೆ ಈ ಬಾರಿ ಅವರು ಪೂರ್ಣ ಪ್ರಮಾಣದದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದು ಶ್ರೀಲಂಕಾ ವಿರುದ್ಧ. ಆದರೆ ಆ ಸರಣಿಯಲ್ಲಿ ಅವರು ಗಾಯಗೊಂಡು ಹೊರಗುಳಿಯಬೇಕಾಯಿತು. ಅದಾದ ಬಳಿಕ ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೂ ಬಳಿಕ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದ್ದರು. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು 360ರನ್ ಮಾತ್ರ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ದೊರೆಯುವ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ R Ashwin: ವಿಶ್ವ ಟೆಸ್ಟ್ ಫೈನಲ್​ನಲ್ಲಿ​ ಅವಕಾಶ ಸಿಗದ ಬಗ್ಗೆ ಕೊನೆಗೂ ಮೌನ ಮುರಿದ ಆರ್​.ಅಶ್ವಿನ್​

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್​ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್‌ ಆಫ್ ಸ್ಪೇನ್‌ (ಜು. 20-24). ಪೋರ್ಟ್‌ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್‌ ಓವಲ್‌’ನಲ್ಲಿ ನಡೆಯುವ 100ನೇ ಟೆಸ್ಟ್‌ ಪಂದ್ಯ ಇದಾಗಿದೆ.

Exit mobile version