ಮಿರ್ಪುರ್: ಟಿ20 ಸರಣಿ ಗೆದ್ದು ಬೀಗಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಏಕದಿನ(INDW vs BANW 1st ODI) ಸರಣಿಯ ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶದ ತಿರುಗೇಟು ನೀಡಿದೆ. ಮಳೆಯಿಂದ ಅಣಚಣೆಯಾದ ಈ ಪಂದ್ಯದಲ್ಲಿ ಬಾಂಗ್ಲಾ ಮಹಿಳೆಯರು 40 ರನ್ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮಿರ್ಪುರದ “ಶೇರ್ ಎ ಬಾಂಗ್ಲಾ” ನ್ಯಾಶನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆಯಿತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು 44 ಓವರ್ಗೆ ಸೀಮಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಬ್ಯಾಟಿಂಗ್ ನಡೆಸಿದ ಬಾಂಗ್ಲಾ 43 ಓವರ್ಗಳಲ್ಲಿ 152ರನ್ಗೆ ಆಲೌಟಾಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ಆಟಗಾರ್ತಿಯರು ಪೆವಿಲಿಯನ್ ಪರೇಡ್ ನಡೆಸಿ 35.5 ಓವರ್ಗಳಲ್ಲಿ ಕೇವಲ 113 ರನ್ಗಳಿಸಲಷ್ಟೇ ಶಕ್ತವಾಗಿ ಹೀನಾಯ ಸೋಲು ಕಂಡಿತು.
ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಅವರು ಟಿ20 ಸರಣಿಯಲ್ಲಿ ಅನುಭವಿಸಿದ ಘೋರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕೇವಲ 11 ರನ್ಗೆ ಸೀಮಿತರಾದರು. ಈ ಮೊತ್ತಕ್ಕೆ 12 ಎಸೆತ ತೆಗೆದುಕೊಂಡರು. ಯಾಸ್ತಿಕಾ ಭಾಟಿಯಾ ಕೂಡ 15 ರನ್ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. 2 ವರ್ಷಗಳ ಬಳಿಕ ಆಡಲಿಳಿದ ಪ್ರಿಯಾ ಪೂನಿಯಾ(Priya Punia) ಕೂಡ ಬ್ಯಾಟಿಂಗ್ ಪ್ರದರ್ಶನ ತೋರ್ಪಡಿಸುವಲ್ಲಿ ಎಡವಿದರು. ಅವರ ಗಳಿಕೆ 10 ರನ್ಗೆ ಕೊನೆಗೊಂಡಿತು.
ಹರ್ಮನ್ಪ್ರೀತ್ ಕೌರ್(Harmanpreet Kaur) ಕೂಡ 5 ರನ್ಗೆ ವಿಕೆಟ್ ಕೈಚೆಲ್ಲುವ ಮೂಲಕ ನಾಯಕಿಯ ಆಟವಾಡುವಲ್ಲಿ ವಿಫಲರಾದರು. ದೀಪ್ತಿ ಶರ್ಮ ಅವರು 20 ರನ್ ಬಾರಿಸಿದ ಪರಿಣಾಮ ತಂಡ 100ರ ಗಡಿ ದಾಟಿತು. ಬಾಂಗ್ಲಾ ಪರ ನಿಗಾರ್ ಸುಲ್ತಾನಾ(39) ಮತ್ತು ಫರ್ಗಾನಾ ಹಕ್(27) ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್ನಲ್ಲಿ ಮೌರುಘಾ ಅಖ್ತರ್(4) ಹಾಗೂ ರೆಬಿಯಾ ಖಾನ್(3) ವಿಕೆಟ್ ಕಿತ್ತು ಭಾರತೀಯ ಆಟಗಾರ್ತಿಯನ್ನು ಕಟ್ಟಿಹಾಕಿದರು.
🟢 BANGLADESH CREATE HISTORY🔵
— Women’s CricZone (@WomensCricZone) July 16, 2023
💫 Marufa Akter 4/29
✅ Rabeya Khan 3/30
🔹🇧🇩 first win against India in ODIs
🔹🇧🇩 register their first win in the ICC Women's Championship (IWC) 2022-25
🔹India's first loss in IWC 2022-25#BANvIND | #CricketTwitter pic.twitter.com/WVTpupO1Kh
ಇದನ್ನೂ ಓದಿ ಸೂರ್ಯಕುಮಾರ್, ಹರ್ಮನ್ಪ್ರೀತ್ ಕೌರ್ಗೆ ವಿಸ್ಡನ್ ಗೌರವ
ಉಭಯ ತಂಡಗಳ ನಡುವಣ ದ್ವಿತೀಯ ಏಕದಿನ ಪಂದ್ಯ ಜುಲೈ 19ರಂದು ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ಜೀವಂತವಾಗಿಡಬೇಕಿದ್ದರೆ ಹರ್ಮನ್ಪ್ರೀತ್ ಕೌರ್ ಬಳಗಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.