Site icon Vistara News

INDW vs BANW 3rd T20: ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶ

Bangladesh Women’s Cricket team

ಮಿರ್ಪುರ್​: ಸಂಘಟಿತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ತೋರಿದ ಬಾಂಗ್ಲಾದೇಶ ಮಹಿಳಾ ತಂಡ ಪ್ರವಾಸಿ ಭಾರತ ವಿರುದ್ಧದ ಅಂತಿಮ ಟಿ20(INDW vs BANW 3rd T20) ಪಂದ್ಯದಲ್ಲಿ ನಾಲ್ಕು ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾ ತವರಿನಲ್ಲಿ ಕ್ಲೀನ್‌ಸ್ವೀಪ್ ಅವಮಾನದಿಂದ ಪಾರಾಗಿದೆ. ಸರಣಿ 2-1 ಅಂತರದಿಂದ ಕೊನೆಗೊಂಡಿದೆ. ಜುಲೈ 16ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.

ಮಿರ್ಪುರದ ಶೇರ್‌ ‘ಎ’ ಬಾಂಗ್ಲಾ ನ್ಯಾಶನಲ್‌ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಬ್ಯಾಟಿಂಗ್​ ಮರೆತವರಂತೆ ಆಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 102 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 18.2 ಓವರ್​ಗಳಲ್ಲಿ ಕೇವಲ 6 ವಿಕೆಟ್​ಗೆ 103 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ದ್ವಿತೀಯ ಪಂದ್ಯದಲ್ಲಿ 95ರಷ್ಟು ಕಡಿಮೆ ಸ್ಕೋರ್‌ ದಾಖಲಿಸಿಯೂ ಈ ಪಂದ್ಯವನ್ನು ಉಳಿಸಿಕೊಂಡ ಭಾರತದ ಅದೃಷ್ಟ ಇಲ್ಲಿ ಕೈ ಹಿಡಿಯಲಿಲ್ಲ. ಬಾಂಗ್ಲಾ ಆಟಗಾರ್ತಿಯರು ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಮೇಲುಗೈ ಸಾಧಿಸಿದರು.

ಈ ಪಂದ್ಯದಲ್ಲಿಯೂ ಭಾರತದ ಬ್ಯಾಟಿಂಗ್​ ತೀರಾ ಕಳಪೆ ಮಟ್ಟದದಿಂದ ಕೂಡಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana)(1), ಶಫಾಲಿ ವರ್ಮ(11) ಅಗ್ಗಕ್ಕೆ ಔಟಾಗಿ ಆರಂಭಿಕ ಆಘಾತ ನೀಡಿದರು. ನಾಯಕಿ ಹರ್ಮನ್​ ಪ್ರೀತ್​ ಕೌರ್​(Harmanpreet Kaur)(40) ಮತ್ತು ಜೆಮಿಮಾ ರೋಡ್ರಿಗಸ್​(28) ಅವರು ನಡೆಸಿದ ಜವಾಬ್ದಾರಿಯುವ ಬ್ಯಾಟಿಂಗ್​ ನರೆವಿನಿಂದ ತಂಡ ನೂರರ ಗಡಿ ದಾಟಿತು. ಉಳಿದಂತೆ ಯಾವ ಆಟಗಾರ್ತಿಯರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ತೋರ್ಪಡಿಸುವಲ್ಲಿ ಯಶಸ್ಸು ಕಾಣಲಿಲ್ಲ. ಬೌಲಿಂಗ್​ನಲ್ಲಿ ದೇವಿಕಾ ವೈದ್ಯ ಅವರು 4 ಓವರ್​ಗೆ 16 ರನ್ ಬಿಟ್ಟು ಕೊಟ್ಟು 2 ವಿಕೆಟ್​ ಪಡೆದರು.

ಇದನ್ನೂ ಓದಿ ಸೂರ್ಯಕುಮಾರ್​, ಹರ್ಮನ್​ಪ್ರೀತ್​ ಕೌರ್​ಗೆ ವಿಸ್ಡನ್ ಗೌರವ

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ಕೂಡ 12 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆದರೆ ಶಮೀಮಾ ಸುಲ್ತಾನಾ(Shamima Sultana) ಅವರು ನಿಂತು ಆಡುವ ಮೂಲಕ ತಂಡಕ್ಕೆ ಆಸರೆಯಾದರು. 46 ಎಸೆತಗಳಿಂದ 42 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್​ನಲ್ಲಿ ರಬೇಯಾ ಖಾನ್ ಕೇವಲ 16 ರನ್​ ನೀಡಿ 3 ವಿಕೆಟ್​ ಕಿತ್ತು ಭಾರತಕ್ಕೆ ಆಘಾತವಿಕ್ಕಿದರು.

Exit mobile version