Site icon Vistara News

INDW vs WIW: ಮಹಿಳೆಯರ ಟಿ20 ತ್ರಿಕೋನ ಸರಣಿ: ಫೈನಲ್​ ಪ್ರವೇಶಿಸಿದ ಭಾರತ ತಂಡ

INDW vs WIW

#image_title

ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ತ್ರಿಕೋನ ಸರಣಿಯಲ್ಲಿ ಭಾರತ(INDW vs WIW) ತಂಡ ಅಜೇಯ ಓಟ ಮುಂದುವರಿಸಿ ಫೈನಲ್‌ಗೆ ಲಗ್ಗೆ ಇರಿಸಿದೆ. ಫೈನಲ್​ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಈಸ್ಟ್‌ ಲಂಡನ್‌ನಲ್ಲಿ ಸೆಣಸಾಟ ನಡೆಸಲಿದೆ.

ಸೋಮವಾರ ನಡೆದ ವಿಂಡೀಸ್​ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ 8 ವಿಕೆಟ್‌ಗಳಿಂದ ಜಯಿಸಿ ಫೈನಲ್​ಗೆ ಲಗ್ಗೆ ಇಟ್ಟಿತು. ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ ಕೇವಲ 94 ರನ್‌ ಮಾಡಿದರೆ, ಭಾರತ 13.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 95 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ ICC Awards: ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಪಡೆದ ಟೀಮ್​ ಇಂಡಿಯಾದ ರೇಣುಕಾ ಸಿಂಗ್​

ಭಾರತ ಪರ ದೀಪ್ತಿ ಶರ್ಮ 11 ರನ್ನಿಗೆ 3 ವಿಕೆಟ್‌ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 2 ಮೇಡನ್‌ ಓವರ್​ ಎಸೆದರು.ಉಳಿದಂತೆ ಪೂಜಾ ವಸ್ತ್ರಾಕರ್‌ 19 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು. ರಾಜೇಶ್ವರಿ ಗಾಯಕ್ವಾಡ್‌ 9 ರನ್​ ನೀಡಿ ಒಂದು ವಿಕೆಟ್​ ಕಿತ್ತರು. ಚೇಸಿಂಗ್‌ ವೇಳೆ ಜೆಮಿಮಾ ರೋಡ್ರಿಗಸ್‌ 42, ಹರ್ಮನ್‌ಪ್ರೀತ್‌ ಕೌರ್‌ 32 ರನ್‌ ಮಾಡಿ ಅಜೇಯರಾಗಿ ಉಳಿದರು.

Exit mobile version