Site icon Vistara News

Asia Cup | ಸೂಪರ್ 4 ಹಣಾಹಣಿಗೆ ಮೊದಲು ಟೀಮ್ ಇಂಡಿಯಾಗೆ ಆಘಾತ, ಗಾಯದಿಂದಾಗಿ ಅಲ್‌ರೌಂಡರ್‌ ಔಟ್‌

Asia Cup

ದುಬೈ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉಪಯುಕ್ತ ೩೫ ರನ್‌ ಬಾರಿಸಿ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದು, ಅವರು ಏಷ್ಯಾ ಕಪ್‌ನ ಮುಂಬರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅಕ್ಷರ್‌ ಪಟೇಲ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಈ ಕುರಿತು ಬಿಸಿಸಿಐ ಪ್ರಕಟಣೆ ಬಿಡುಗಡೆ ಮಾಡಿದ್ದು “ಜಡೇಜಾ ಅವರು ಬಲಗಾಲಿನ ಮಂಡಿಯ ಸಮಸ್ಯೆ ಎದುರಿಸುತ್ತಿದ್ದು, ಅವರು ಏಷ್ಯಾ ಕಪ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅಕ್ಷರ್‌ ಪಟೇಲ್‌ಗೆ ಅವಕಾಶ ನೀಡಲಾಗಿದೆ,” ಎಂದು ಹೇಳಿದೆ.

ಎಡಗೈ ಬ್ಯಾಟರ್‌ ಹಾಗೂ ಎಡಗೈ ಬೌಲರ್‌ ಆಗಿರುವ ಅಕ್ಷರ್‌ ಪಟೇಲ್‌ ಅವರು ಏಷ್ಯಾ ಕಪ್‌ ಟೂರ್ನಿಗೆ ಮೀಸಲು ಅಟಗಾರರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ಪ್ರಮುಖ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಜಡೇಜಾ ಅವರು ಪಾಕಿಸ್ತಾನ ವಿರುದ್ಧ ಎರಡು ಓವರ್‌ಗಳನ್ನು ಎಸೆದು ೧೧ ರನ್‌ ಮಾತ್ರ ನೀಡಿದ್ದರು. ಬ್ಯಾಟಿಂಗ್‌ನಲ್ಲಿ ೨೯ ಎಸೆತಗಳಲ್ಲಿ ೩೫ ರನ್‌ ಬಾರಿಸಿದ್ದರು. ಅಂತೆಯೇ ಹಾಂಕಾಂಗ್‌ ವಿರುದ್ಧ ನಾಲ್ಕು ಓವರ್‌ಗಳಲ್ಲಿ ೧೫ ರನ್‌ ನೀಡಿ ೧ ವಿಕೆಟ್‌ ಪಡೆದು, ಅದ್ಭುತ ರನ್‌ ಔಟ್‌ ಮಾಡಿದ್ದರು.

ಭಾರತ ತಂಡ :

ರೋಹಿತ್‌ ಶರ್ಮ (ನಾಯಕ), ಕೆ. ಎಲ್‌ ರಾಹುಲ್‌ (ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡಾ, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಆರ್‌. ಅಶ್ವಿನ್, ಯಜ್ವೇಂದ್ರ ಚಹಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌.

Exit mobile version