Site icon Vistara News

INDvsAUS : ಗಾಯಗೊಂಡ ಶ್ರೇಯಸ್ ಅಯ್ಯರ್​ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅಲಭ್ಯ

Injured Shreyas Iyer is also unavailable for the ODI series against Australia

#image_title

ಅಹಮದಾಬಾದ್​: ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್​ ಮಾರ್ಚ್ 17ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ()INDvsAUS ವಿರುದ್ಧದ ಏಕ ದಿನ ಸರಣಿಯಲ್ಲಿ ಭಾಗವಹಿಸುವುದು ಅನುಮಾನ ಎನಿಸಿದೆ. ಶ್ರೇಯಸ್ ಅಯ್ಯರ್​ ಕೆಳ ಬೆನ್ನು ನೋವಿಗೆ ಒಳಗಾದ ಕಾರಣ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ತಪಾಸಣೆಗೆ ಒಳಪಡಿಸುತ್ತಿದೆ. ಒಂದು ವೇಳೆ ಅವರಿಗೆ ಹೆಚ್ಚು ದಿನಗಳ ವಿಶ್ರಾಂತಿ ಸೂಚಿಸಿದರೆ ಅವರು ಆಡುವುದು ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ.

ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ಸರಣಿಗೆ ತಂಡವನ್ನು ಸಜ್ಜಗೊಳಿಸುವುದಕ್ಕಾಗಿ ಬಿಸಿಸಿಐ ನಾನಾ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಆದರೆ, ಯುವ ಆಟಗಾರರ ತಂಡವನ್ನೇ ಕಟ್ಟುವುದು ಕ್ರಿಕೆಟ್ ಮಂಡಳಿಯ ಯೋಜನೆಯೂ ಆಗಿದೆ. ಆದರೆ, ತಂಡದ ಆಟಗಾರರು ಪದೇ ಪದೆ ಗಾಯದ ಸಮಸ್ಯೆಗೆ ಒಳಗಾಗುತ್ತಿರುವುದು ಚಿಂತೆಯ ವಿಷಯವಾಗಿ ಮಾರ್ಪಟ್ಟಿದೆ. ಅಂತೆಯೇ ಶ್ರೇಯಸ್ ಅಯ್ಯರ್​ ವಿಶ್ವ ಕಪ್​ನ ತಂಡ ಸೇರಲಿರುವ ಸಂಭಾವ್ಯ ಆಟಗಾರ. ಆದರೆ, ಅವರಿಗೆ ಎದುರಾಗುತ್ತಿರುವ ಬೆನ್ನು ನೋವು ಟೀಮ್​ ಮ್ಯಾನೇಜ್ಮೆಂಟ್​ಗೆ ತಲೆನೋವು ತಂದಿದೆ.

ಇದನ್ನೂ ಓದಿ : IND VS AUS: ದ್ವಿತೀಯ ಟೆಸ್ಟ್​ಗೆ ಶ್ರೇಯಸ್​ ಅಯ್ಯರ್​; ಸೂರ್ಯಕುಮಾರ್ ಯಾದವ್​​ ಡೌಟ್​?

ಇದೇ ವೇಳೆ ಟೀಮ್ ಇಂಡಿಯಾದ ಆಟಗಾರರು ಪದೇಪದೇ ಗಾಯದ ಸಮಸ್ಯೆಗೆ ಒಳಗಾಗುವುದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ತಲೆನೋವಿಗೂ ಕಾರಣವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಶ್ರೇಯಸ್ ಅಯ್ಯರ್​ಗೆ ಫಿಟ್​ ಎಂದು ಎನ್​ಸಿಎ ಆಡಲು ಅನುಮತಿ ಕೊಟ್ಟಿತ್ತು. ಆದರೆ, ಶ್ರೇಯಸ್​ ಸಮಸ್ಯೆ ಇನ್ನೂ ಕೊನೆಗಂಡಿಲ್ಲ. ಅದೇ ರೀತಿ ಜಸ್​ಪ್ರಿತ್ ಬುಮ್ರಾ ಕೂಡ ಕಳೆದ ಹಲವು ತಿಂಗಳಿಂದ ಭಾರತ ತಂಡದ ಸೇವೆಗೆ ದೊರೆಯುತ್ತಿಲ್ಲ.

Exit mobile version