ನವದೆಹಲಿ: ಏಷ್ಯಾಕಪ್ನಲ್ಲಿ ಭಾರತ ವಿರುದ್ಧದ ಫೈನಲ್ನಲ್ಲಿ ಕೇವಲ 50 ರನ್ಗೆ ಕುಸಿದಿದ್ದ ಶ್ರೀಲಂಕಾ ವಿಶ್ವಕಪ್ನ(icc world cup 2023) ಮೊದಲ ಪಂದ್ಯವನ್ನು ಆಡಲು ಸಜ್ಜಾಗಿ ನಿಂತಿದೆ. ಶನಿವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಲಂಕಾ 100ರ ಗಡಿ ದಾಟಿತೇ ಎನ್ನುವುದು ಈ ಪಂದ್ಯದ ಕೌತುಕ.
ಲಂಕಾಗೆ ಗಾಯದ ಚಿಂತೆ
ಶ್ರೀಲಂಕಾ ತಂಡಕ್ಕೆ ಗಾಯದ ಚಿಂತೆ ಕಾಡಿದೆ. ಸ್ಟಾರ್ ಆಟಗಾರ ವನಿಂದು ಹಸರಂಗ ತಂಡದಲ್ಲಿದ್ದರೂ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಕೇವಲ ಲೆಕ್ಕ ಭರ್ತಿಗೆ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಏಷ್ಯ ಕಪ್ನಲ್ಲಿಯೂ ಅವರು ಆಡಿರಲಿಲ್ಲ. ಅವರ ಅಲಭ್ಯತೆ ತಂಡಕ್ಕೆ ಬಿದ್ದ ದೊಡ್ಡ ಹೊಡೆತ ಎನ್ನಲಡ್ಡಿಯಿಲ್ಲ. 19 ವರ್ಷದ ದುನಿತ್ ವೆಲ್ಲಲಗೆ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಅವರು ಏಷ್ಯಾಕಪ್ನಲ್ಲಿ ಭಾರತ ವಿರುದ್ಧ ರೋಹಿತ್, ವಿರಾಟ್, ರಾಹುಲ್ ಸೇರಿ 5 ವಿಕೆಟ್ ವಿಕೆಟ್ ಕಿತ್ತು ಮಿಂಚಿದ್ದರು. ಭಾರತವೂ ಸ್ಪಿನ್ ಪಿಚ್ ಆದ ಕಾರಣ ಅವರ ಬೌಲಿಂಗ್ ಮೇಲೆ ನಿರೀಕ್ಷೆಯೊಂದನ್ನು ಮಾಡಲಾಗಿದೆ.
ಬ್ಯಾಟಿಂಗ್ ಬಲಿಷ್ಠವಾಗಿಲ್ಲ
ಬ್ಯಾಟಿಂಗ್ ವಿಚಾರದಲ್ಲಿ ಲಂಕಾ ತುಂಬಾ ಸುಧಾರಣೆ ಕಾಣಬೇಕಿದೆ. ನಾಯಕ ದಸುನ್ ಶಣಕ ಹಲವು ಸರಣಿ ಆಡಿದರೂ ಇನ್ನೂ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಿರಿಯ ಆಟಗಾರ ದಿಮುತ್ ಕರುಣರತ್ನೆ ಕೂಡ ಇದೇ ಸಾಲಿಗೆ ಸೇರಿದ್ದಾರೆ. ಸದ್ಯಕ್ಕೆ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡೀಸ್ ಅಡ್ಡಿಯಿಲ್ಲ. ಇವರ ಮೇಲೆ ಬರವಸೆಯೊಂದನ್ನು ಇಡಬಹುದಾಗಿದೆ.
ದಕ್ಷಿಣ ಆಫ್ರಿಕಾ ಸಮರ್ಥ ತಂಡ
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅತ್ಯಂತ ಸಮರ್ಥವಾಗಿದೆ. ಬ್ಯಾಟಿಂಗ್ನಲ್ಲಿ ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ಟೆಂಬ ಬವುಮಾ, ರಸ್ಸಿ ವಾನ್ಡರ್ ಡುಸ್ಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್ ಇವರೆಲ್ಲ ಸಿಡಿದು ನಿಂತರೆ ದೊಡ್ಡ ಮೊತ್ತಕೇನು ಕೊರತೆಯಾಗದು. ಬೌಲಿಂಗ್ ಕೂಡ ಘಾತವಾಗಿದೆ. ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಸ್ಪಿನ್ನಲ್ಲಿ ಕೇಶವ್ ಮಹಾರಾಜ್, ತಬ್ರೇಜ್ ಸಂಶಿ ಮೋಡಿ ಮಾಡಬಲ್ಲರು. ಇವರನ್ನೆಲ್ಲ ಹಿಡಿದು ನಿಲ್ಲಿಸಿ ಲಂಕಾ ಗೆದ್ದರೆ ಲಂಕಾದ ಸಾಹಸವನ್ನು ಮೆಚ್ಚಲೇ ಬೇಕು.
ಇದನ್ನೂ ಓದಿ ICC World Cup 2023 : ಹೈದರಾಬಾದ್ ಬಿರಿಯಾನಿ vs ಕರಾಚಿ ಬಿರಿಯಾನಿ; ಕ್ರಿಕೆಟ್ ವೇದಿಕೆಯಲ್ಲಿ ಜೋರು ಚರ್ಚೆ
ಲಂಕಾ ತಂಡ ಮೈನಸ್ ಪಾಯಿಂಟ್
1. ಸ್ಟಾರ್ ಪ್ಲೇಯರ್‌ಗಳು ಇರದಿರುವುದು ಶ್ರೀಲಂಕಾ ತಂಡಕ್ಕೆ ಕಂಟಕವಾಗಲಿದೆ. ಅದರಲ್ಲೂ, ವನಿಂದು ಹಸರಂಗ ಅವರಂತಹ ಮಹತ್ವದ ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿರುವುದು ಲಂಕಾಗೆ ಕಾಡಲಿದೆ.
2. ಅನುಭವಿ ವೇಗಿಗಳು ಇಲ್ಲದಿರುವುದು ಲಂಕಾಗೆ ಸಮಸ್ಯೆಯಾಗಿದೆ. ಲಹಿರು ಕುಮಾರ ಅವರು ಉತ್ತಮ ಬೌಲರ್ ಆಗಿದ್ದರೂ, ಲೈನ್ ಆ್ಯಂಡ್ ಲೆಂತ್ ಕೊರತೆ ಇದೆ.
3. ದಸುನ್ ಶನಕ ಅವರ ನಾಯಕತ್ವದ ಬಗ್ಗೆ ಉತ್ತಮ ಅಭಿಪ್ರಾಯ ಇದ್ದರೂ ಯುವ ಪಡೆಯೇ ಇರುವುದರಿಂದ ಸಂಕಷ್ಟದ ಸಮಯದಲ್ಲಿ ಹೇಗೆ ನಿಭಾಯಿಸುತ್ತಾರೆ, ಯುವ ಪಡೆ ಹೇಗೆ ನಿಭಾಯಿಸುತ್ತದೆ ಎಂಬುದು ತಂಡವನ್ನು ಚಿಂತೆಗೀಡುಮಾಡಿದೆ.
ದಕ್ಷಿಣ ಆಫ್ರಿಕಾದ ಮೈನಸ್ ಪಾಯಿಂಟ್
1. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಭಾರತದ ಪಿಚ್‌ಗಳಲ್ಲಿ ಕೇಶವ್ ಮಹಾರಾಜ್ ಅವರಿಗೆ ಸಾಥ್ ನೀಡುವ ಸಮರ್ಥ ಸ್ಪಿನ್ನರ್ ಕೊರತೆಯನ್ನು ದಕ್ಷಿಣ ಆಫ್ರಿಕಾ ಎದುರಿಸುತ್ತಿದೆ. ಟಬ್ರೈಜ್ ಶಮ್ಸಿ ಇದ್ದರೂ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಮ್ಯಾರ್ಕ್ರಮ್ ಅವರು ಸಾಥ್ ನೀಡಿದರೆ ಮಾತ್ರ ದಕ್ಷಿಣ ಆಫ್ರಿಕಾ ಸ್ಪಿನ್ ಬೌಲಿಂಗ್ ಸುಧಾರಿಸುತ್ತದೆ.
2. ಭಾರತದ ಪಿಚ್‌ಗಳಲ್ಲಿ ಓಪನರ್ ಕ್ವಿಂಟನ್ ಡಿ ಕಾಕ್ ಇದುವರೆಗೆ ದಕ್ಷಿಣ ಆಫ್ರಿಕಾಗೆ ಹೆಚ್ಚು ನೆರವಾಗದಿರುವುದು ತೆಂಬ ಬವುಮಾ ಅವರಿಗೆ ತಲೆನೋವಾಗಿದೆ. ಕ್ವಿಂಟನ್ ಡಿ ಕಾಕ್ ಐಪಿಎಲ್ ಆಡಿದರೂ, ವಿಶ್ವಕಪ್‌ನಲ್ಲಿ ಅವರು ಹೇಗೆ ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಇನ್ನೂ ರೀಜಾ ಹೆಂಡ್ರಿಕ್ಸ್ ಹಾಗೂ ರಸ್ಸೀ ವ್ಯಾನ್ ಡೆರ್ ಡುಸೇನ್ ಅವರ ಬ್ಯಾಟಿಂಗ್ ಸುಧಾರಿಸಬೇಕಿದೆ.
3. ಕಳೆದ ಒಂದು ವರ್ಷದಲ್ಲಿ ತಂಡದ ಸ್ಥಿರ ಪ್ರದರ್ಶನದ ಕೊರತೆ, ಡೆತ್ ಓವರ್‌ಗಳಲ್ಲಿ ದುಬಾರಿಯಾಗುವುದು, ಇನ್ನೇನು ಪಂದ್ಯ ಗೆದ್ದೇಬಿಟ್ಟರು ಎನ್ನುವಷ್ಟರಕ್ಕೆ ಗೊಂದಲಕ್ಕೆ ಒಳಗಾಗಿ ಪಂದ್ಯ ಕೈಚೆಲ್ಲುವುದನ್ನು ಬಿಟ್ಟರೆ ಮಾತ್ರ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿ ಕಿತ್ತೆಸೆಯಲು ಸಾಧ್ಯವಾಗಲಿದೆ.