Site icon Vistara News

Ind vs Pak | ಪಾಕಿಸ್ತಾನ ತಂಡದ ಮತ್ತೊಬ್ಬ ವೇಗಿಗೂ ಗಾಯದ ಬಾಧೆ, ಅಭ್ಯಾಸಕ್ಕೆ ಗೈರು

ind vs pak

ದುಬೈ : ಶಹೀನ್‌ ಶಾ ಅಫ್ರಿದಿ ಅವರ ಅಲಭ್ಯತೆಯಿಂದ ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮತ್ತೊಂದು ಆತಂಕ ಎದುರಾಗಿದ್ದು, ವೇಗದ ಬೌಲರ್‌ ಮೊಹಮ್ಮದ್‌ ವಾಸಿಮ್‌ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಕೆಳ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಶುಕ್ರವಾರ ಅಭ್ಯಾಸಕ್ಕೆ ಬರಲಿಲ್ಲ. ಹೀಗಾಗಿ ಭಾರತ ವಿರುದ್ಧದ ಹಣಾಹಣಿಗೆ ಮೊದಲು ಸಂಕಷ್ಟಕ್ಕೆ ಸಿಲುಕಿದೆ.

೨೧ ವರ್ಷದ ವೇಗದ ಬೌಲರ್‌ ಎಂಆರ್‌ಐ ಸ್ಕ್ಯಾನ್‌ ಒಳಗಾಗಿದ್ದು, ಗಾಯದ ಸಮಸ್ಯೆ ಹೆಚ್ಚಾಗದಂತೆ ಮಾಡಲು ಪಾಕಿಸ್ತಾನ ಕ್ರಿಕೆಟ್‌ ತಂಡದ ಮ್ಯಾನೇಜ್ಮೆಂಟ್‌ ಮುಂದಾಗಿದೆ. ಕಳೆದ ಜುಲೈನಲ್ಲಿ ಪಾಕಿಸ್ತಾನ ತಂಡದ ಪರ ಪದಾರ್ಪಣೆ ಮಾಡಿರುವ ಯುವ ಬೌಲರ್‌ ವಾಸಿಮ್‌, ಎಂಟು ಏಕ ದಿನ ಪಂದ್ಯಗಳು ಹಾಗೂ ೧೧ ಟಿ೨೦ ಪಂದ್ಯಗಳಲ್ಲಿ ಆಡಿದ್ದಾರೆ.

ವಾಸಿಮ್‌ ಅವರು ಗಾಯದ ಸಮಸ್ಯೆಯಿಂದ ಬೇಗ ಗುಣಮುಖರಾಗಲಿದ್ದಾರೆ. ಭಾರತ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್‌ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ | IND vs PAK | ಭಾರತದಲ್ಲಿ ಎ, ಬಿ,ಸಿ ತಂಡಗಳಿವೆ, ಸೋಲಿಸುವುದು ಸುಲಭವಲ್ಲ ಎಂದ ಪಾಕ್‌ ಮಾಜಿ ಸ್ಪಿನ್ನರ್‌

Exit mobile version