Site icon Vistara News

Border- Gavaskar Trophy : ಆಸೀಸ್ ಬಳಗಕ್ಕೆ ಗಾಯದ ಬರೆ, ಜೋಶ್​ ಹೇಜಲ್​ವುಡ್​ ಸರಣಿಗೆ ಅಲಭ್ಯ?

Josh Hazlewood is unavailable for the third Test match

#image_title

ನಾಗ್ಪುರ: ಟೆಸ್ಟ್​ ಸರಣಿಗಾಗಿ ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಆ ತಂಡದ ಪ್ರಮುಖ ಬೌಲರ್​ ಜೋಶ್​ ಹೇಜಲ್​ವುಡ್​ ಕೂಡ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್​ ಸರಣಿಯ ಮೊದಲ ಭಾಗಕ್ಕೆ ಅಲಭ್ಯರಾಗಲಿದ್ದಾರೆ. ಹಿಂಗಾಲಿನ ನೋವಿಗೆ ಒಳಗಾಗಿರುವ ಅವರು ಬೆಂಗಳೂರಿನ ಆಲೂರಿನಲ್ಲಿ ಅಭ್ಯಾಸ ನಡೆಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರು ಅವರು ಬಾರ್ಡರ್​ ಗವಾಸ್ಕರ್ ಟ್ರೋಫಿ (Border- Gavaskar Trophy) ಮೊದಲಾರ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿದೆ.

ಹೇಜಲ್​ವುಡ್ ಅವರು ಕಳೆದ ತಿಂಗಳು ನಡೆದ ಸಿಡ್ನಿ ಟೆಸ್ಟ್​ನಲ್ಲಿ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅಲ್ಲಿಂದ ಅವರು ವಿಶ್ರಾಂತಿ ಪಡೆದುಕೊಂಡಿದ್ದರು. ಆದರೂ ಈಗ ಅವರು ಸಂಪೂರ್ಣ ಗುಣಮುಖರಾಗದ ಕಾರಣ ಭಾರತಕ್ಕೆ ಪ್ರವಾಸ ಮಾಡಿಲ್ಲ ಎಂದು ಹೇಳಲಾಗಿದೆ. ಇದರಿಂದ ಪ್ರವಾಸಿ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಯಾಕೆಂದರೆ ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಬೌಲರ್​ ಮಿಚೆಲ್​ ಸ್ಟಾರ್ಕ್​ ಮೊದಲ ಪಂದ್ಯದಲ್ಲಿ ಆಡುವುದಿಲ್ಲ. ಇದೀಗ ಎರಡನೇ ಬೌಲರ್​ ಕೂಡ ಅಲಭ್ಯರಾಗಿದ್ದಾರೆ.

ಭಾನುವಾರ ಆಸ್ಟ್ರೇಲಿಯಾ ತಂಡ ಬೆಂಗಳೂರಿನ ಆಲೂರಿನಲ್ಲಿ ಕೊನೇ ಹಂತದ ಅಭ್ಯಾಸ ನಡೆಸಿದೆ. ಅದಾದ ಬಳಿಕ ಮಾತನಾಡಿದ ಹೇಜಲ್​ವುಡ್​ ಮುಂದಿನ ಪಂದ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಖಾತರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ICC ODI Ranking ಪಟ್ಟಿಯಲ್ಲಿ ನಾಲ್ಕು ಸ್ಥಾನ ಬಡ್ತಿ ಪಡೆದ ರನ್​ ಮಷಿನ್​ ವಿರಾಟ್​ ಕೊಹ್ಲಿ

ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​ ಕೂಡ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ. ಈ ಮೂಲಕವೂ ಪ್ರವಾಸಿ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ.

Exit mobile version