Site icon Vistara News

Olympics -2028 | ಲಾಸ್‌ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ

Olympics -2028

ಲಾಸ್‌ ಏಂಜಲೀಸ್‌ : ಹಾಲಿ ಆವೃತ್ತಿಯ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳೆಯ ಟಿ೨೦ ಕ್ರಿಕೆಟ್‌ ಸೇರಿಸಲಾಗಿದ್ದು, ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿವೆ. ಇದರಿಂದ ಪ್ರೇರಿತಗೊಂಡಿರುವ ೨೦೨೮ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಆಯೋಜಕರು ಸ್ಪರ್ಧೆಗಳ ಪಟ್ಟಿಗೆ ಕ್ರಿಕೆಟ್‌ ಕೂಡ ಸೇರಿಸಲು ಮುಂದಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ಪ್ರಸ್ತಾಪವೊಂದನ್ನು ಕಳುಹಿಸಿದೆ. ಅಂದುಕೊಂಡಂತೆ ಎಲ್ಲವೂ ಸಾಗಿದರೆ ಆ ಆವೃತ್ತಿಯ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವೂ ಪಾಲ್ಗೊಳ್ಳಬಹುದು.

ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಎಂಟು ಹೊಸ ಕ್ರೀಡೆಗಳ ಸೇರ್ಪಡೆಯೊಂದಿಗೆ ಒಟ್ಟು ೨೮ ಕ್ರೀಡೆಗಳಿಗೆ ಪದಕ ನೀಡುವುದಾಗಿ ಈ ಹಿಂದೆಯೇ ಹೇಳಿತ್ತು .ಇದೀಗ ಸೇರ್ಪಡೆ ಮಾಡಲು ಸಾಧ್ಯವಿರುವಂಥ ಕ್ರೀಡೆಗಳ ಪಟ್ಟಿಯನ್ನು ತಯಾರಿಸಿ ಆಯಾ ಕ್ರೀಡೆಗಳ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಸಂಪರ್ಕಿಸಿ ಪ್ರಸ್ತಾಪ ಮುಂದಿಟ್ಟಿದೆ.

೨೦೨೩ರ ಮಧ್ಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಪ್ರಕಟಗೊಳ್ಳಲಿದೆ. ಅದಕ್ಕಿಂತ ಮೊದಲು ಸ್ಥಳೀಯ ಆಯೋಜಕರು ಆಯಾಯ ಕ್ರೀಡಾ ಸಂಸ್ಥೆಗಳಿಂದ ವರದಿ ತರಿಸಿಕೊಂಡು ಸಭೆಯಲ್ಲಿ ವರದಿ ಮಂಡನೆ ಮಾಡಲಿದೆ.

ಯಾವ್ಯಾವ ಕ್ರೀಡೆಗಳು :

ಬೇಸ್‌ಬಾಸ್‌/ ಸಾಫ್ಟ್‌ಬಾಲ್‌, ಫ್ಲ್ಯಾಗ್ ಫುಟ್ಬಾಲ್‌, ಲ್ಯಾಕ್ರೋಸ್‌, ಬ್ರೇಕ್‌ಡಾನ್ಸಿಂಗ್‌, ಕರಾಟೆ, ಕಿಕ್‌ಬಾಕ್ಸಿಂಗ್‌, ಸ್ಕ್ವಾಷ್‌ ಮತ್ತು ಮೋಟಾಸ್‌ ಸ್ಪೋರ್ಟ್ಸ್‌ ಸೇರ್ಪಡೆಯಾಗಲಿರುವ ಕ್ರೀಡೆಗಳಾಗಿವೆ.

ಏಷ್ಯಾ ದೇಶಗಳಲ್ಲಿ ಕ್ರಿಕೆಟ್‌ ಹೆಚ್ಚು ಜನಪ್ರಿಯವಾಗಿರುವ ಜತೆಗೆ ಎಲ್ಲರನ್ನೂ ಒಳಗೊಂಡಿರುವ ಕ್ರೀಡಾಕೂಟವನ್ನು ಆಯೋಜಿಸಿರುವುದು ಕಾಮನ್ವೆಲ್ತ್‌ ಕ್ರೀಡಾಕೂಟದ ಆಯೋಜಕರ ಗುರಿಯಾಗಿದೆ. ಹೀಗಾಗಿ ಕ್ರಿಕೆಟ್‌ಗೂ ಮಾನ್ಯತೆ ನೀಡಲು ಆಯೋಜಕರು ಮುಂದಾಗಿದ್ದಾರೆ.

ಇದನ್ನೂ ಸೇರ್ಪಡೆ | ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಗೆ ಕೋಟಿ ಕೋಟಿ ಲಾಭ ತಂದುಕೊಟ್ಟ ಭಾರತ ವಿಕೆಟ್‌ಕೀಪರ್‌

Exit mobile version