ಕರಾಚಿ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಪಾಕಿಸ್ತಾನದ ತಕರಾರು ಮುಗಿದಂತೆ ಕಾಣುತ್ತಿಲ್ಲ. ಟಿ20 ವಿಶ್ವಕಪ್(T20 World Cup 2024) ಟೂರ್ನಿಯಿಂದ ಹೊರಬಿದ್ದಿರುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತಿದೆ. ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಇಂಜಮಾಮ್ ಉಲ್ ಹಕ್(Inzamam Ul Haq) ಅವರು ಭಾರತದ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಇಂಜಮಾಮ್ ಉಲ್ ಹಕ್ ಈ ಆರೋಪ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಸಲೀಂ ಮಲಿಕ್ ಅವರು ವೇಗಿ ಅರ್ಶ್ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆದರೆ, ಇಂಜಮಾಮ್ ಅವರು ಅರ್ಶ್ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ ಎಂದು ಹೇಳಿದರು.
“15ನೇ ಓವರ್ನಲ್ಲಿ ಅರ್ಶದೀಪ್ ಸಿಂಗ್ ಬೌಲಿಂಗ್ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್ನಲ್ಲಿ ಚೆಂಡಿಗೆ ಶೈನಿಂಗ್ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ ಪಾಕ್ ತಂಡದ ಸರಣಿ ಸೋಲಿನ ರಹಸ್ಯ ಬಯಲು ಮಾಡಿದ ಮಾಜಿ ನಾಯಕ
ಇಂಜಮಾಮ್ ಅವರ ಈ ಆರೋಪಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸರಿಯಾದ ತಿಇರುಗೇಟು ನೀಡಿದ್ದಾರೆ. ನೀವು ಮಾಡುತ್ತಿರುವ ಈ ಆರೋಪ ಯಾವ ಕಾರಣಕ್ಕೆ ಎಂದು ಭಾರತೀಯರಿಗೆ ಮಾತ್ರವಲ್ಲ ಬೇರೆ ದೇಶದ ಕ್ರಿಕೆಟಿಗರಿಗು ತಿಳಿದಿದೆ. ಟೂರ್ನಿಯಿಂದ ಹೊರ ಬಿದ್ದರೂ ಕೂಡ ಕೊಂಕು ಬಯಸುವ ನಿಮ್ಮ ಈ ನರಿ ಬುದ್ದಿಯನ್ನು ಮೊದಲು ಬಿಟ್ಟು ಬಿಡಿ ಎಂದಿದ್ದಾರೆ.
ಪಾಕ್ ತಂಡ ಈ ಬಾರಿ ಆಡಿದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧವೂ ಹೀನಶಯವಾಗಿ ಸೋಲು ಕಂಡಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವ 2 ಪಂದ್ಯ ಮಾತ್ರ ಗೆದ್ದು ಲೀಗ್ ಹಂತದಿಂದಲೇ ನಿರ್ಗಮನ ಕಂಡಿತ್ತು. ಈ ಸೋಲು ಪಾಕ್ನ ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಭಾರತದ ಬಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾರಂಭಿಸಿದ್ದಾರೆ.
ಪಾಕಿಸ್ತಾನದ ಮಾಜಿ ಆಟಗಾರರು ಭಾರತೀಯ ಆಟಗಾರರ ಮೇಲೆ ಈ ರೀತಿಯ ಆರೋಪಗಳು ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಇಂತಹ ಹಲವು ಆರೋಪಗಳನ್ನು ಮಾಡಿದ್ದರು. ಭಾರತೀಯ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ನಡೆಸುವ ವೇಳೆ ಬೇರೆ ಬೆಂಡನ್ನು ಬಳಸುತ್ತಾರೆ, ಐಸಿಸಿ ಕೂಡ ಭಾರತಕ್ಕೆ ಬೆಂಬಲ ನೀಡುತ್ತಿದೆ ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು.