ಹೈದರಾಬಾದ್: ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್ಗೆ (IPL 2023) ಸನ್‌ರೈಸರ್ಸ್ ಹೈದರಾಬಾದ್(SRH) ತಂಡ ಕೊನೆಗೂ ನಾಯಕನ ಹೆಸರನ್ನು ಘೋಷಣೆ ಮಾಡಿದೆ. ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್ರೌಂಡರ್ ಏಡೆನ್ ಮಾರ್ಕ್ರಮ್ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಫೆಬ್ರವರಿ 22 ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತಂಡದ ನೂತನ ನಾಯಕನ ಹೆಸರು ಗುರುವಾರ(ಫೆ.23) ಘೋಷಣೆ ಮಾಡುವುದಾಗಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿತ್ತು. ಅದರಂತೆ ಇದೀಗ ಫ್ರಾಂಚೈಸಿ ನಾಯಕನ ಹೆಸರನ್ನು ಘೋಷಣೆ ಮಾಡಿದೆ.
‘2023ರ ಐಪಿಎಲ್ ಟೂರ್ನಿಯಲ್ಲಿ ಏಡೆನ್ ಮಾರ್ಕ್ರಮ್ ಸಾರಥ್ಯದಲ್ಲಿ ತಂಡ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯ ಕಂಡ ಚೊಚ್ಚಲ ಆವೃತ್ತಿಯ ಎಸ್‌ಎ 20 ಲೀಗ್‌ನಲ್ಲಿ ಸನ್‌ರೈಸರ್ಸ್ ಕೇಪ್‌ಟೌನ್ ತಂಡ ಮಾರ್ಕ್ರಮ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಐಪಿಎಲ್ನಲ್ಲಿಯೂ ಇವರ ನೇತೃತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದು ಫ್ರಾಂಚೈಸಿ ಹೇಳಿದೆ.
ಇದನ್ನೂ ಓದಿ IPL 2023 : ಈ ಬಾರಿ ಐಪಿಎಲ್ 4K ರೆಸೊಲ್ಯೂಶನ್ನಲ್ಲಿ ಪ್ರಸಾರ, ಅದೂ ಫ್ರೀ
ಮಾರ್ಕ್ರಮ್ ನಾಯಕನಾಗಿ ಆಯ್ಕೆಯಾದ ಕಾರಣ ಈ ರೇಸ್ನಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ನಿರಾಸೆಯಾಗಿದೆ. ಸನ್‌ರೈಸರ್ಸ್ ತಂಡದ ನಾಯಕತ್ವವಹಿಸಿಕೊಳ್ಳುವುದರೊಂದಿಗೆ ಐಪಿಎಲ್ ತಂಡವನ್ನು ಮುನ್ನಡೆಸುವ ಐದನೇ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ಹೆಗ್ಗಳಿಕೆಗೆ ಮಾರ್ಕ್ರಮ್ ಪಾತ್ರರಾಗಿದ್ದಾರೆ.