Site icon Vistara News

IPL-2023 | ಮುಂದಿನ ಡಿಸೆಂಬರ್‌ನಲ್ಲಿ ನಡೆಯುವುದೇ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ?

ipl2023

ಮುಂಬಯಿ: ಐಪಿಎಲ್‌ ೧೬ನೇ ಆವೃತ್ತಿಗೆ(IPL-2023) ಆಟಗಾರರ ಹರಾಜು ಪ್ರಕ್ರಿಯೆ ಮುಂದಿನ ಡಿಸೆಂಬರ್‌ ೧೬ರಂದು ನಡೆಯಲಿದೆ ಎಂಬುದಾಗಿ ವರದಿಯಾಗಿದೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಕ್ರಿಕೆಟ್ ವೆಬ್‌ಸೈಟ್‌ ಒಂದು ಈ ಬಗ್ಗೆ ವರದಿ ಮಾಡಿದ್ದು ಬಿಸಿಸಿಐ ಹಾಗೂ ಐಪಿಎಲ್‌ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಈ ಕುರಿತು ಸಣ್ಣ ಸೂಚನೆ ನೀಡಿದೆ ಎನ್ನಲಾಗಿದೆ.

ಮುಂದಿನ ಆವೃತ್ತಿಯ ಐಪಿಎಲ್‌ ಆರಂಭದ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ೨೦೨೩ರ ಮಾರ್ಚ್‌ ನಾಲ್ಕನೇ ವಾರದಲ್ಲಿ ಆರಂಭವಾಗಬಹುದು ಎನ್ನಲಾಗಿದೆ. ಅಂತೆಯೇ ಹೋಮ್‌ ಮತ್ತು ಅವೇ ಮಾದರಿಯಲ್ಲಿ ನಡೆಯಲಿರುವ ಕಾರಣ ಟೂರ್ನಿಯ ಆಯೋಜನೆಗೆ ವಿಶೇಷ ಕಾಳಜಿ ವಹಿಸಲಿದೆ ಬಿಸಿಸಿಐ. ಹೀಗಾಗಿ ಡಿಸೆಂಬರ್‌ನಲ್ಲಿ ಹರಾಜಿಗೆ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.

ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದ ಬಳಿಕ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಯೋಜನೆ ರೂಪಿಸಬಹುದು. ಈ ಬಾರಿಯದ್ದು ಮಿನಿ ಹರಾಜು ಪ್ರಕ್ರಿಯೆಯಾಗಿದ್ದು, ಹರಾಜಿನ ದಿನಕ್ಕೆ ಮೊದಲು ಎಲ್ಲ ೧೦ ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಅಟಗಾರರನ್ನು ಬಿಡುಗಡೆ ಮಾಡಲಿದೆ. ಬಳಿಕ ಒಟ್ಟು ೯೫ ಕೋಟಿ ರೂಪಾಯಿ ಮೊತ್ತಕ್ಕೆ ಪೂರಕವಾಗಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲಿವೆ.

ಇದನ್ನೂ ಓದಿ | IPL 2023 | ಆರ್‌ಸಿಬಿ ಅಭಿಮಾನಿಗಳಿಗೆ ಶುಭ ಸುದ್ದಿ, ಈ ಬಾರಿ ಐಪಿಎಲ್‌ ಪಂದ್ಯಗಳು ಬೆಂಗಳೂರಿನಲ್ಲಿ; ಯಾಕಿರಬಹುದು?

Exit mobile version