Site icon Vistara News

IPL 2023: ಟಾಸ್​ ಗೆದ್ದ ಆರ್​ಸಿಬಿ ತಂಡದಿಂದ ಬೌಲಿಂಗ್​ ಆಯ್ಕೆ

Royal Challengers Bangalore vs Kolkata Knight Riders

Royal Challengers Bangalore vs Kolkata Knight Riders

ಬೆಂಗಳೂರು: ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಕೆಕೆಆರ್​ ಬ್ಯಾಟಿಂಗ್​ ಆಹ್ವಾನ ಪಡೆದಿದೆ. ಕಳೆದ ಎರಡು ಪಂದ್ಯಗಳಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದಿದ್ದ ಫಾಪ್​ ಡು ಪ್ಲೆಸಿಸ್​ ಈ ಪಂದ್ಯದಲ್ಲಿಯೂ ಇಂಪ್ಯಾಕ್ಟ್​ ಪ್ಲೇಯರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಮತ್ತೆ ನಾಯಕನಾಗಿ ಮುಂದುವರಿದಿದ್ದಾರೆ.

ಆರ್​ಸಿಬಿ ಕೇವಲ 4 ಮಂದಿ ಆಟಗಾರರನ್ನು ಮಾತ್ರ ನೆಚ್ಚಿಕೊಂಡಿದೆ. ಉಳಿದ ಎಲ್ಲ ಆಟಗಾರರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ, ಡು ಪ್ಲೆಸಿಸ್​, ಮಾಕ್ಸ್​ವೆಲ್​ ಮತ್ತು ಸಿರಾಜ್​ ಅವರು ಈ ಪಂದ್ಯದಲ್ಲಿ ಕೈ ಕೊಟ್ಟರೆ ತಂಡದ ಮತ್ತೊಮ್ಮೆ ಹೀನಾಯ ಸೋಲು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಸೋಲು, ಗೆಲುವಿನ ಭವಿಷ್ಯ ಈ ನಾಲ್ಕು ಆಟಗಾರರ ಪ್ರದರ್ಶನದ ಮೇಲೆ ನಿಂತಿದೆ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು.

ಇದನ್ನೂ ಓದಿ IPL 2023: ಶುಭಮನ್​ ಗಿಲ್​ಗೆ ಕಪಾಳಮೋಕ್ಷ ಮಾಡಿದ ಇಶಾನ್​ ಕಿಶನ್​; ವಿಡಿಯೊ ವೈರಲ್​

ಸಂಭಾವ್ಯ ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್​ ಡು ಪ್ಲೆಸಿಸ್​, ವಿರಾಟ್ ಕೊಹ್ಲಿ(ನಾಯಕ), ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್​, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್​ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶದೀಪ್, ಹಿಮಾಂಶು ಶರ್ಮಾ, ಮಿಚೆಲ್ ಬ್ರೇಸ್‌ವೆಲ್, ವೈಶಾಖ್​ ವಿಜಯ್​ ಕುಮಾರ್​.

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್​ ಅಯ್ಯರ್​, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್​, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫ‌ರ್ಗ್ಯುಸನ್‌, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

Exit mobile version