ಚೆನ್ನೈ: ಶನಿವಾರದ ಡಬಲ್ ಹೆಡರ್ ಐಪಿಎಲ್ನ(IPL 2023) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಚೆನ್ನೈನ ಚೆಪಾಕ್ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇದು 4 ವರ್ಷಗಳ ಬಳಿಕ ಇತ್ತಂಡಗಳ ನಡುವೆ ನಡೆಯುತ್ತಿರುವ ಮುಖಾಮುಖಿಯಾಗಿವೆ. 2019ರಲ್ಲಿ ಇಲ್ಲಿ ನಡೆದಿದ್ದ 2 ಪಂದ್ಯದಲ್ಲಿಯೂ ಮುಂಬೈ ಜಯ ಸಾಧಿಸಿತ್ತು. ಹೀಗಾಗಿ ಚೆನ್ನೈಗೆ ಇದು ಸೇಡಿನ ಪಂದ್ಯವಾಗಿದೆ.
ಮುಂಬೈ ಆರಂಭಿಕ ಆಘಾತದಿಂದ ಹಂತ ಹಂತವಾಗಿ ಚೇತರಿಸಿಕೊಂಡು 9 ಪಂದ್ಯಗಳಲ್ಲಿ 5 ಗೆದ್ದಿದೆ. ಹೀಗಾಗಿ ಮುಂಬೈ ಆತ್ಮವಿಶ್ವಾಸ ಬಹಳಷ್ಟು ಎತ್ತರ ತಲುಪಿದೆ. ನಾಯಕ ರೋಹಿತ್ ಶರ್ಮ ಹೊರತುಪಡಿಸಿ ಉಳಿದವರೆಲ್ಲ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇಶಾನ್ ಕಿಶನ್, ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಸೇರಿಕೊಂಡು ದೊಡ್ಡ ಮೊತ್ತವನ್ನು ಬೆನ್ನಟ್ಟುವಲ್ಲಿ ಸಮರ್ಥರಿದ್ದಾರೆ.
ಚೆನ್ನೈ ತಂಡ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡಿ ಬಳಿಕ ಕೊಂಚ ಮಂಕಾದಂತೆ ತೋರುತ್ತಿದೆ. ಈ ಪಂದ್ಯದಲ್ಲಿ ಯಾವ ರೀತಿಯಲ್ಲಿ ಪ್ರದರ್ಶನ ತೋರಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023: ರಾಹುಲ್ ಬದಲು ಲಕ್ನೋ ತಂಡ ಸೇರಿದ ಕನ್ನಡಿಗ ಕರುಣ್ ನಾಯರ್
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಆರ್. ಹಂಗರ್ಗೇಕರ್
ಮಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್.