Site icon Vistara News

IPL 2023: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಹೆಸರು ಘೋಷಣೆಗೆ ಡೇಟ್​ ಫಿಕ್ಸ್​; ಯಾರಿಗೆ ಒಲಿಯಲಿದೆ ನಾಯಕನ ಪಟ್ಟ

ipl-2023-date-picks-for-sunrisers-hyderabad-captain-name-announcement-who-will-win-the-title-of-leader

ipl-2023-date-picks-for-sunrisers-hyderabad-captain-name-announcement-who-will-win-the-title-of-leader

ಹೈದರಾಬಾದ್​: 16ನೇ ಆವೃತ್ತಿಯ ಐಪಿಎಲ್​ಗೆ​ (IPL 2023) ಸನ್‌ರೈಸರ್ಸ್ ಹೈದರಾಬಾದ್(SRH) ತಂಡದ ನಾಯಕನ ಹೆಸರು ಘೋಷಣೆ ಮಾಡಲು ಕೊನೆಗೂ ಮುಹೂರ್ತ ನಿಗದಿಯಾಗಿದೆ. ಫೆಬ್ರವರಿ 22 ಗುರುವಾರ ತಂಡದ ನೂತನ ನಾಯಕನ ಹೆಸರು ಘೋಷಣೆ ಮಾಡುವುದಾಗಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ತಂಡದ ನಾಯಕತ್ವದ ರೇಸ್​ನಲ್ಲಿ ಕನ್ನಡಿಗ ಮಯಾಂಕ್​ ಅಗರ್ವಾಲ್ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್​ ಆಲ್​ರೌಂಡರ್​ ಏಡೆನ್‌ ಮಾರ್ಕ್ರಮ್‌ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಮೂಲಗಳ ಪ್ರಕಾರ ಮಾರ್ಕ್ರಮ್‌ ನಾಯಕನಾಗುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯ ಕಂಡ ಚೊಚ್ಚಲ ಆವೃತ್ತಿಯ ಎಸ್‌ಎ 20 ಲೀಗ್‌ನಲ್ಲಿ ಸನ್‌ರೈಸರ್ಸ್ ಕೇಪ್‌ಟೌನ್ ತಂಡಕ್ಕೆ ಮಾರ್ಕ್ರಮ್‌ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಅವರಿಗೆ ನಾಯಕತ್ವ ನೀಡಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ IPL 2023 : ಈ ಬಾರಿ ಐಪಿಎಲ್​ 4K ರೆಸೊಲ್ಯೂಶನ್​ನಲ್ಲಿ ಪ್ರಸಾರ, ಅದೂ ಫ್ರೀ

ನಾಯಕತ್ವದ ರೇಸ್‌ನಲ್ಲಿರುವ ಮತ್ತೊಬ್ಬ ಪ್ರಮುಖ ಆಟಗಾರ ಮಯಾಂಕ್ ಅಗರ್ವಾಲ್ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದರೂ ಅವರ ಸಾರಥ್ಯದಲ್ಲಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಆದ್ದರಿಂದ ಅವರಿಗೆ ನಾಯಕತ್ವ ಸಿಗುವುದು ಅನುಮಾನ ಎನ್ನಲಾಗಿದೆ. ಒಟ್ಟಾರೆ ಎಲ್ಲ ಪ್ರಶ್ನೆಗಳಿಗೂ ಗುರುವಾರ ಉತ್ತರ ಸಿಗಲಿದೆ.​

Exit mobile version