ಅಹಮದಾಬಾದ್: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 11 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೆ, 17 ವಿಕೆಟ್ಗಳೊಂದಿಗೆ ಹಾಲಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಏತನ್ಮಧ್ಯೆ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರ ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಗಂಡ ಹೊಂದಿದ ವಿವಾಹೇತ ಸಂಬಂಧದ ಪ್ರಕರಣದಲ್ಲಿ ಅವರನ್ನು ಬಂಧಿಸಬೇಕು ಎಂದು ಸುಪ್ರೀಕೋರ್ಟ್ಗೆ (supreme court) ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಕೋರ್ಟ್ ಒಪ್ಪಿಗೆ ಕೊಟ್ಟರೆ ಬಂಧನವಾಗುವ ಸಾಧ್ಯತೆಗಳಿವೆ.
ಪತಿ ಮೊಹಮ್ಮದ್ ಶಮಿ ವೇಶ್ಯೆಯೊಬ್ಬಳ ಜತೆ ವಿವಾಹೇತರ ಸಂಬಂಧ ಹೊಂದಿರುವುದಾಗಿ ಹಸಿನ್ ಜಹಾನ್ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಬಂಧನ ಕೋರ್ಟ್ನಿಂದ ಶಮಿ ಬಂಧನ ತಡೆ ತಂದಿದ್ದರು. ಅದನ್ನು ಪ್ರಶ್ನಿಸಿ ಜಹಾನ್ ಕೋಲ್ಕೊರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಶಮಿಗೆ ಜಯವಾಗಿತ್ತು. ಕೋರ್ಟ್ ಹಸಿನ್ ಅರ್ಜಿಯನ್ನು ವಜಾಗೊಳಿಸಿದ್ದರು. ಹೀಗಾಗಿ ಹಸಿನ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮೊಹಮ್ಮದ್ ಶಮಿ ಅವರ ಪತ್ನಿ ಮಾರ್ಚ್ 28, 2023ರ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ. ಈ ಆದೇಶ ಸೂಕ್ತವಾಗಿಲ್ಲ. ಅಕ್ರಮ ಸಂಬಂಧ ಹೊಂದಿರುವ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅರ್ಜಿಯಲ್ಲಿ ಏನಿದೆ?
ಮೊಹಮ್ಮದ್ ಶಮಿ ತಮ್ಮ ಮದುವೆಯುದ್ದಕ್ಕೂ ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು ಹಾಗೂ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಹಸೀನ್ ಜಹಾನ್ ಆರೋಪಿಸಿದ್ದಾರೆ. ಶಮಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಮತ್ತು ಈ ಹಿಂದೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿಯೂ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸೀನ್ ಜಹಾನ್ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ಶಮಿ ಬಿಸಿಸಿಐ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು. ಬಿಸಿಸಿಐ ಕಾಯ್ದಿರಿಸಿದ ಹೋಟೆಲ್ ಕೊಠಡಿಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ.
ಮೊಹಮ್ಮದ್ ಶಮಿ ಹೋಟೆಲ್ಗಳಲ್ಲಿ ಅನಯ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ. ಅದರ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದಾಗ, ಮೊಹಮ್ಮದ್ ಶಮಿ ಮತ್ತು ಅವರ ಕುಟುಂಬ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಹಾನ್ ಹೇಳಿದ್ದಾರೆ.
ಇದನ್ನೂ ಓದಿ : ವIPL 2023 : ಬೌಲಿಂಗ್ನಲ್ಲಿ ಶತಕ ಬಾರಿಸಿದ ಮೊಹಮ್ಮದ್ ಶಮಿ, ಏನಿದು ಸಾಧನೆ?
ಹಸೀನ್ ಜಹಾನ್ ಅವರ ವಕೀಲರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ, “ಅರ್ಜಿದಾರರು ಅದರ ವಿರುದ್ಧ ಧ್ವನಿ ಎತ್ತಿದಾಗ, ಅವರ ಪತಿ ಮತ್ತು ಅವರ ಕುಟುಂಬ ಸದಸ್ಯರು ಅವಳ ಮೇಲೆ ಹಲ್ಲೆ ನಡೆಸಿದರು ಮತ್ತು ಕಿರುಕುಳ ನೀಡಿದರು, ಅವರು ನಿರಂತರವಾಗಿ ವರದಕ್ಷಿಣೆಗಾಗಿ ಒತ್ತಾಯಿಸಿದರು” ಎಂದು ಹೇಳಲಾಗಿದೆ.
ನಾಲ್ಕು ವರ್ಷಗಳಿಂದ ಬಾಕಿ ಇದೆ
ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಪ್ರಕರಣವು ಕಳೆದ ನಾಲ್ಕು ವರ್ಷಗಳಿಂದ ಕೋಲ್ಕೊತಾ ಹೈಕೋರ್ಟ್ನಲ್ಲಿದೆ. ವಿಚಾರಣೆ ಮುಂದುವರಿಯುತ್ತಲೇ ಇದೆ. ಈ ಕುರಿತು ಮಾತನಾಡಿದ ಜಹಾನ್ ಈ ಪ್ರಕರಣವು ತನ್ನ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಆರೋಪಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಹಸೀನ್ ಜಹಾನ್ ಅವರು ಮೊಹಮ್ಮದ್ ಶಮಿ ವಿರುದ್ಧ ಅವಹೇಳನಕಾರಿ ಚಾಟ್ಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಶಮಿ ಮಹಿಳೆಯರೊಂದಿಗೆ ನಡೆಸಿದ್ದ ಚಾಟ್ಗಳಿದ್ದವು ಎನ್ನಲಾಗಿದೆ. ಮಹಿಳೆಯರನ್ನು ಹೋಟೆಲ್ಗೆ ಕೋಣೆಗೆ ಆಹ್ವಾನಿಸುವ ಚಾಟ್ಗಳೂ ಅದರಲ್ಲಿದ್ದವು ಎಂದು ಹೇಳಲಾಗಿದೆ.