ಮುಂಬಯಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2023) ಮಾರ್ಚ್ 31 ರಿಂದ ಆರಂಭವಾಗಿ ಮೇ 21 ರ ವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಅಭ್ಯಾಸ ಆರಂಭಿಸಿದೆ. ಇದೀಗ ಲಕ್ನೋ ಸೂಪರ್ಜೈಂಟ್ಸ್(Lucknow Super Giants) ತಂಡ ನೂತನ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ.
ನೂತನ ಜೆರ್ಸಿಯನ್ನು ಮಂಗಳವಾರ(ಮಾರ್ಚ್ 7) ತಂಡದ ನಾಯಕ ಕೆ.ಎಲ್. ರಾಹುಲ್(, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಬಿಡುಗಡೆಗೊಳಿಸಿದರು. ಈ ಜೆರ್ಸಿಯಲ್ಲಿ ಕಡು ನೀಲಿ ಬಣ್ಣದೊಂದಿಗೆ ಕೆಂಪು ಬಣ್ಣದ ವಿನ್ಯಾಸಗಳನ್ನೂ ಕೂಡ ಬಳಸಲಾಗಿದೆ. ಈ ಮೂಲಕ ಬಾರಿಯ ಐಪಿಎಲ್ನಲ್ಲಿ ಲಕ್ನೋ ತಂಡವು ಹೊಸ ಬಣ್ಣ ಹಾಗೂ ಹೊಸ ಜೋಶ್ನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ನೂತನ ಜೆರ್ಸಿಯ ಫೋಟೊವನ್ನು ಲಕ್ನೋ ಸೂಪರ್ಜೈಂಟ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವೀಟರ್ನಲ್ಲಿ ಹಂಚಿಕೊಂಡಿದೆ. ಹೊಸ ಜೆರ್ಸಿಯನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 1 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಲಿದೆ.