Site icon Vistara News

IPL 2023: ಅತಿರೇಕದ ವರ್ತನೆ; ವಿರಾಟ್​ ಕೊಹ್ಲಿಗೆ ದಂಡ

IPL playoff matches in Chennai, Ahmedabad?

IPL 2023

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೋಮವಾರ ತವರಿನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ತಂಡ 8 ರನ್​ಗಳ ಸೋಲು ಕಂಡಿದೆ. ಸೋಲಿನ ಶಾಕ್​ ಮಧ್ಯೆ ವಿರಾಟ್​ ಕೊಹ್ಲಿಗೆ ದಂಡದ ಬಿಸಿ ತಟ್ಟಿದೆ. ಅತಿರೇಕದ ವರ್ತನೆ ತೋರಿದ್ದರಿಂದ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ಡೆವೋನ್​ ಕಾನ್ವೆ(83) ಮತ್ತು ಶಿವಂ ದುಬೆ(52) ಅವರ ಅರ್ಧಶತಕದ ನೆರವಿನಿಂದ 6 ವಿಕೆಟಿಗೆ 226 ರನ್‌ ಪೇರಿಸಿತು. ಬೃಹತ್​ ಮೊತ್ತ ಬೆನ್ನಟ್ಟಿದ ಆರ್‌ಸಿಬಿ 8 ವಿಕೆಟಿಗೆ 218 ರನ್‌ ಗಳಿಸಿ ಶರಣಾಯಿತು.

ಆರ್​ಸಿಬಿ ವೇಗಿ ವೇಯ್ನ್​ ಪರ್ನೆಲ್​​ ಅವರು ಚೆನ್ನೈ ತಂಡದ ಆರಂಭಿಕ ಆಟಗಾರ ಶಿವಂ ದುಬೆ ಅವರ ವಿಕೆಟ್​ ಕಿತ್ತ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ಅತ್ಯಂತ ಅಗ್ರೆಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು. ಇದೇ ಕಾರಣಕ್ಕೆ ಪಂದ್ಯದ ರೆಫ್ರಿ, ಕೊಹ್ಲಿ ಅವರು ಐಪಿಎಲ್​ನ ಕೋಡ್ ಆಫ್ ಕಂಡಕ್ಟ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್‌ 2.2  ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಮಾಡಿರುವುದಾಗಿ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಪಂದ್ಯದ ರೆಫ್ರಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ಐಪಿಎಲ್​ ತಿಳಿಸಿದೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್​ ನಡೆಸಿದರು. 4 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಆಕಾಶ್ ಸಿಂಗ್‌ ಬೌಲಿಂಗ್‌ನಲ್ಲಿ ವಿಕೆಟ್​ ಕೈ ಚೆಲ್ಲಿದರು.

ಇದನ್ನೂ ಓದಿ IPL 2023 : ರಿಕಿ ಪಾಂಟಿಂಗ್ ಕೋಚಿಂಗ್ ಹುದ್ದೆಗೆ ಕುತ್ತು ತಂದಿದೆ ಡೆಲ್ಲಿ ಕ್ಯಾಪಿಟಲ್ಸ್​ ಪ್ರದರ್ಶನ

ಪಂದ್ಯ ಸೋತರು ಸ್ಫೋಟಕ ಬ್ಯಾಟಿಂಗ್​ ನಡೆಸಿದ ಡು ಪ್ಲೆಸಿಸ್​-ಮ್ಯಾಕ್ಸ್​ವೆಲ್​

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿಗೆ ನಾಯಕ ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ನೆರವಾದರು. ಆರಂಭದಲ್ಲೇ ಧೋನಿ ಅವರಿಂದ ಜೀವದಾನ ಪಡೆದ ಡು ಪ್ಲೆಸಿಸ್​ ಬಳಿಕ ಸಿಡಿದು ನಿಂತರು. ಇದರ ಜತೆಗೆ ಮತ್ತೊಂದು ತುದಿಯಲ್ಲಿ ಮ್ಯಾಕ್ಸ್​ವೆಲ್ ಕೂಡ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಈ ಜೋಡಿ 3ನೇ ವಿಕೆಟಿಗೆ 61 ಎಸೆತಗಳಿಂದ 126 ರನ್‌ ಒಟ್ಟುಗೂಡಿಸಿತು. ಅಬ್ಬರಿಸಿದ ಮ್ಯಾಕ್ಸ್‌ವೆಲ್‌ 36 ಎಸೆತಗಳಿಂದ 76 ರನ್‌ ಚಚ್ಚಿದರು. 4 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಡು ಪ್ಲೆಸಿಸ್​ 33 ಎಸೆತಗಳಿಂದ 62 ರನ್​ ಬಾರಿಸಿದರು. ಆದರೂ ಪಂದ್ಯವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

Exit mobile version