ಅಹಮದಾಬಾದ್: ಇಂದು(ಮಂಗಳವಾರ) ನಡೆಯುವ ಐಪಿಎಲ್ನ 35ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು 5 ಬಾರಿ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಆದರೆ ಇದೀಗ ಈ ಪಂದ್ಯ ಬೇರೆಯದದ್ದೇ ಕಾರಣಕ್ಕೆ ಸುದ್ದಿಯಾಗಿದೆ. ಪಂದ್ಯದ ಫಲಿತಾಂಶಕ್ಕಿಂತ ಸಾರಾ ತೆಂಡೂಲ್ಕರ್(sara tendulkar) ಅವರ ಬೆಂಬಲ ಯಾರಿಗೆ ಸಿಗಲಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿವೆ.
ಹೌದು, ನೆಟ್ಟಿಗರು ಈ ಚರ್ಚೆ ಮಾಡಲು ಕಾರಣವೆಂದರೆ ಮುಂಬೈ ಇಂಡಿಯನ್ಸ್ ಪರ ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿಯುತ್ತಿದ್ದಾರೆ. ಗುಜರಾತ್ ಪರ ಶುಭಮನ್ ಗಿಲ್ ಆಡುತ್ತಿದ್ದಾರೆ. ಈಗಾಗಲೇ ಸಾರಾ ತೆಂಡೂಲ್ಕರ್ ಮತ್ತು ಗಿಲ್ ಇಬ್ಬರು ಕದ್ದು ಮುಚ್ಚಿ ಡೇಟಿಂಗ್ ನಡೆಸುತ್ತಿದ್ದಾರೆ, ಅವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದೇ ವಿಚಾರವಾಗಿ ಇದೀಗ ಈ ಪಂದ್ಯದಲ್ಲಿ ಸಾರಾ ಅವರು ತಮ್ಮ ಪ್ರಿಯಕರ ಎಂದು ಹೇಳಲಾಗುತ್ತಿರುವ ಗಿಲ್ಗೆ ಸಪೋರ್ಟ್ ಮಾಡುತ್ತಾರಾ ಅಥವಾ ತಮ್ಮನಿಗೆ ಬೆಂಬಲ ಸೂಚಿಸಲಿದ್ದಾರಾ ಎಂದು ನೆಟ್ಟಿಗರು ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ IPL 2023 : ಅರ್ಜುನ್ ತೆಂಡೂಲ್ಕರ್ ಟ್ರೋಲ್ ಮಾಡಬೇಡಿ ಎಂದ ನಟಿ ಪ್ರೀತಿ ಜಿಂಟಾ
ಈಗಾಗಲೇ ಇದೇ ವಿಚಾರವಾಗಿ ಟ್ವಿಟರ್ನಲ್ಲಿ ಹಲವು ಮೀಮ್ಸ್ಗಳು ಹರಿದಾಡಿದೆ. ಒಂದೊಂದು ಮೀಮ್ಸ್ ಕೂಡ ವಿಭಿನ್ನವಾಗಿದೆ. ಗಿಲ್ ಅವರು ಹಲವು ಬಾರಿ ಶತಕ ಸಿಡಿಸಿ ಸಂಭ್ರಮಿಸಿದ್ದ ವೇಳೆ ಮತ್ತು ಹಲವು ಸರಣಿಗಳನ್ನು ಆಡುತ್ತಿದ್ದ ವೇಳೆ ಪ್ರೇಕ್ಷರು ಗಿಲ್ ಅವರನ್ನು ಕಂಡಾಗ ಸಾರಾ ಹೆಸರು ಕೂಗಿದ ಹಲವು ನಿದರ್ಶನಗಳಿವೆ. ಇದೀಗ ಈ ಪಂದ್ಯದಲ್ಲಿ ಗಿಲ್ ಮತ್ತು ಸಾರಾ ಕೂಡ ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತಷ್ಟು ಕುತೂಹಲ ಮೂಡಿಸಿದೆ. ಸಾರಾ ಅವರು ಈಗಾಗಲೇ ಅಹಮದಾಬಾದ್ಗೆ ಬಂದಿಳಿದಿದ್ದಾರೆ. ಒಟ್ಟಾರೆಯಾಗಿ ಈ ಪಂದ್ಯ ಸಾರಾ ಮತ್ತು ಗಿಲ್ ಹೆಸರಿನಿಂದಲೇ ಅಟ್ರ್ಯಾಕ್ಷನ್ ಎನಿಸಿಕೊಂಡಿದೆ.