Site icon Vistara News

IPL 2023: ಐಪಿಎಲ್​ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ ಶುಭಮನ್​ ಗಿಲ್​

Virat Kohli has been my idol ever since I started learning cricket: Shubman Gill

ಅಹಮದಾಬಾದ್​: ನ್ಯೂ ಬ್ಯಾಟಿಂಗ್​ ಸೆನ್ಷೇಷನಲ್ ಶುಭಮನ್​ ಗಿಲ್(Shubman Gill) ಅವರು ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ 2 ಸಾವಿರ ರನ್​ ಪೂರೈಸಿದ ದ್ವಿತೀಯ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಕೋಲ್ಕತ್ತಾ ನೈಟ್​​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಶುಭಮನ್​ ಗಿಲ್​ 23ರನ್​ ಗಳಿಸಿದ ವೇಳೆ ಐಪಿಎಲ್​ನಲ್ಲಿ 2 ಸಾವಿರ ರನ್​ ಪೂರ್ತಿಗೊಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಟೀಮ್​ ಇಂಡಿಯಾದ ಎರಡನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಪಂತ್​ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್​ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇನ್ನು ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಗಿಲ್ ಈ ಮೇಲುಗಲ್ಲು ತಲುಪಲು 74 ಇನಿಂಗ್ಸ್​ ತೆಗೆದುಕೊಂಡರು. ಕೆ.ಎಲ್​. ರಾಹುಲ್​​ ಅವರು 60 ಇನಿಂಗ್ಸ್​ನಲ್ಲಿ 2 ಸಾವಿರ ರನ್​ ಪೂರೈಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್​ ತೆಂಡೂಲ್ಕರ್​ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಗಿಲ್​ 31 ಎಸೆತಗಳಿಂದ 5 ಬೌಂಡರಿ ಬಾರಿಸಿ 39 ರನ್​ ಬಾರಿಸಿದರು.

ಇದನ್ನೂ ಓದಿ IPL 2023: ಸಿಡಿದ ವಿಜಯ್​ ಶಂಕರ್; ಬೃಹತ್​ ಮೊತ್ತ ಪೇರಿಸಿದ ಗುಜರಾತ್​ ಟೈಟನ್ಸ್

2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಪರವಾಗಿ ಐಪಿಎಲ್​ಗೆ ಪದಾಪರ್ಣೆ ಮಾಡಿದ ಶುಭಮನ್​ ಗಿಲ್​ ಈವರೆಗೆ 77 ಪಂದ್ಯಗಳಲ್ಲಿ ಆಡಿದ್ದಾರೆ. 32.5 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ ಅವರು ಸದ್ಯ 2,016 ರನ್ ಗಳಿಸಿದ್ದಾರೆ. 15 ಅರ್ಧಶತಕ ಗಳಿಸಿದ್ದು 202 ಬೌಂಡರಿ ಹಾಗೂ 50 ಸಿಕ್ಸರ್​ಗಳನ್ನು ಹೊಡೆದಿದ್ದಾರೆ. 96 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಸದ್ಯ ಟೀಮ್​ ಇಂಡಿಯಾದಲ್ಲಿಯೂ ಮಿಂಚುತ್ತಿರುವ ಈ ಯುವ ಆಟಗಾರನನ್ನು ಭವಿಷ್ಯದ ವಿರಾಟ್​ ಕೊಹ್ಲಿ ಎಂದೇ ಹೇಳಲಾಗುತ್ತಿದೆ. ಕಳೆದ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ದ್ವಿಶತಕ ಬಾರಿಸಿ ಮಿಂಚಿದ್ದರು.

Exit mobile version