ಮುಂಬಯಿ: ಮಂಗಳವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಅವರು ನೀಡಿದ ಒಂದು ನಿರ್ಧಾರಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ. ನಿಗದಿತ ಸಮಯ ಮುಗಿದಿದ್ದರೂ ಅಂಪೈರ್ ಅವರು ಡಿಆರ್ಎಸ್ಗೆ ಸಮ್ಮತಿ ಸೂಚಿಸಿರುವ ಕ್ರಮಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಪರ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹಾ ಇನಿಂಗ್ಸ್ ಆರಂಭಿಸಿದರು. ಅರ್ಜುನ್ ತೆಂಡೂಲ್ಕರ್ ಅವರ ಈ ಓವರ್ನಲ್ಲಿ ವೃದ್ಧಿಮಾನ್ ಸಾಹಾ ಅವರು ಔಟಾದರು. ಆದರೆ ಈ ತೀರ್ಪನ್ನು ಒಪ್ಪದ ವೃದ್ಧಿಮಾನ್ ಸಹ ಸಹ ಆಟಗಾರ ಶುಭ್‌ಮನ್ ಗಿಲ್ ಬಳಿ ಚರ್ಚಿಸಿ ಡಿಆರ್‌ಎಸ್ ರಿವ್ಯೂ ಪಡೆದರು ಅಷ್ಟರಲ್ಲಾಗಲೇ ನಿಗದಿತ ಸಮಯ ಮುಗಿದಿತ್ತು. ಆದರೂ ಅಂಪೈರ್ ಈ ಮನವಿಯನ್ನು ಮಾನ್ಯಮಾಡಿದ್ದಾರೆ. ಇದೀಗ ಅಂಪೈರ್ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಜೋಶ್ ಹ್ಯಾಜಲ್ವುಡ್ ಅನುಮಾನ!
ಈ ಬಾರಿಯ ಐಪಿಎಲ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಹಲವು ತಪ್ಪುಗಳು ಕಂಡು ಬಂದಿವೆ. ಅದರಲ್ಲೂ ವಿಚಿತ್ರವಾದ ತಪ್ಪುಗಳೇ ಅಧಿಕ ಕೆಲವು ಎಲ್ಬಿಡಬ್ಲ್ಯು ರಿವ್ಯೂನಲ್ಲಿ ಚೆಂಡು ಪ್ಯಾಡ್ನಿಂದ ದೂರ ಇದ್ದರೂ ಔಟ್ ನೀಡಿದ್ದಾರೆ ಕೆಲವು ಎಸೆತ ವಿಕೆಟ್ನಿಂದ ಮೇಲೆ ಇದದ್ದರೂ ನೋಬಾಲ್ ಇಲ್ಲ. ಹೀಗೆ ಹಲವು ತಪ್ಪುಗಳು ಕಂಡುಬಂದಿವೆ. ತಂತ್ರಜ್ಞಾನದಿಂದ ಉಪಯೋಗ ಹೆಚ್ಚಾಗಬೇಕು ಹೊರತು ಸಮಸ್ಯೆ ಆದರೆ ಏನು ಲಾಭ ಎಂದು ನೆಟ್ಟಿಗರು ಬಿಸಿಸಿಐ ಮತ್ತು ಐಪಿಎಲ್ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಪಂದ್ಯ ಗೆದ್ದ ಗುಜರಾತ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬಯಿ ಬಳಗ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಸೋಲೊಪ್ಪಿಕೊಂಡಿತು.