Site icon Vistara News

IPL 2024: 10 ವರ್ಷದ ಐಪಿಎಲ್​ ಜರ್ನಿಯ ಭಾವನಾತ್ಮಕ ವಿಡಿಯೊ ಹಂಚಿಕೊಂಡ ಹಾರ್ದಿಕ್​ ಪಾಂಡ್ಯ

IPL 2024:hardik pandya

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಇಂಡಿಯನ್ ಪ್ರೀಮಿಯರ್ ಲೀಗ್‌ನ(Indian Premier League) 17 ನೇ(IPL 2024) ಆವೃತ್ತಿ ಆರಂಭಕ್ಕೂ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 10ನೇ ಐಪಿಎಲ್ ಋತುವನ್ನು ಆಡಲಿರುವ ಹಾರ್ದಿಕ್ ಪಾಂಡ್ಯ(Hardik Pandya) ತಮ್ಮ ಐಪಿಎಲ್​ ಜರ್ನಿಯನ್ನು ಭಾವನಾತ್ಮಕ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ‘ಯಾವಾಗಲೂ ತನ್ನ ಹೃದಯದಲ್ಲಿ ನೆಲೆಸಿರುವ ತಂಡದೊಂದಿಗೆ ಮತ್ತೆ ಐಪಿಎಲ್​ ಆಡಲು ಕಾತರವಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಅವರು ತಮ್ಮ ಐಪಿಎಲ್​ ಜರ್ನಿ ಆರಂಭಿಸಿದ್ದು ಮುಂಬೈ ಇಂಡಿಯನ್ಸ್​ ಪರ ಆಡುವ ಮೂಲಕ ಇದೀಗ ಅವರು ತಂಡದ ನಾಯಕನಾಗಿದ್ದಾರೆ(MI skipper Hardik Pandya). ಅಂದಿನಿಂದ ಇಂದಿನವರೆಗೆ ಮುಂಬೈ ಪರ ಆಡಿದ ಎಲ್ಲ ಸವಿ ನೆನಪುಗಳ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯವನ್ನು ಮಾರ್ಚ್​ 27ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ IPL 2024: ರಾಜಸ್ಥಾನ್ ರಾಯಲ್ಸ್​​ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

ಪಾಂಡ್ಯ ಐಪಿಎಲ್​ ಸಾಧನೆ

ಪಾಂಡ್ಯ ಅವರು 2015-2021ರಲ್ಲಿ ಮುಂಬೈ ಇಂಡಿಯನ್ಸ್​ ಪರ ಒಟ್ಟು 92 ಪಂದ್ಯಗಳನ್ನು ಆಡಿದ್ದರು. 153 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33 ರ ಸರಾಸರಿಯಲ್ಲಿ 1,476 ರನ್ ಗಳಿಸಿದ್ದಾರೆ, ನಾಲ್ಕು ಅರ್ಧ ಶತಕಗಳು ಹಾಗೂ 42 ವಿಕೆಟ್‌ಗಳನ್ನು ಪಡೆದಿದ್ದಾರೆ. 2022-23 ರಿಂದ ಗುಜರಾತ್ ಟೈಟಾನ್ಸ್‌ ಪರ 31 ಪಂದ್ಯಗಳನ್ನು ಆಡಿರುವ ಪಾಂಡ್ಯ, 37.86 ರ ಸರಾಸರಿಯಲ್ಲಿ 133 ಸ್ಟ್ರೈಕ್ ರೇಟ್‌ನಲ್ಲಿ 833 ರನ್ ಗಳಿಸಿದ್ದರು. ಇದರಲ್ಲಿ ಆರು ಅರ್ಧ ಶತಕಗಳು ಬಾರಿಸಿದ್ದರು. ಅಜೇಯ 87 ರನ್​ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಬೌಲಿಂಗ್​ನಲ್ಲಿಯೂ ಕಮಾಲ್ ಮಾಡಿ 11 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 17 ರನ್​ಗೆ 3 ವಿಕೆಟ್​ ಅತ್ಯುತ್ತಮ ಬೌಲಿಂಗ್​ ಪ್ರದರ್ಶನವಾಗಿದೆ.

ವಿಶ್ವಕಪ್​ ವೇಳೆ ಗಾಯ

ಏಕದಿನ ವಿಶ್ವಕಪ್​ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಲೀಗ್​ ಪಂದ್ಯದಲ್ಲಿ ಬೌಲಿಂಗ್​ ನಡೆಸುವಾಗ ಪಾಂಡ್ಯ ಚೆಂಡನ್ನು ತೆಡೆಯುವ ಪ್ರಯತ್ನದಲ್ಲಿ ಜಾರಿ ಬಿದ್ದು ಪಾದದ ನೋವಿಗೆ ತುತ್ತಾಗಿದ್ದರು. ಬಳಿಕ ಚಿಕ್ಸೆಗೆ ಪಡೆದದರೂ ಗಾಯ ಗಂಭೀರ ಸ್ವರೂಪದಿಂದ ಕೂಡಿದ ಕಾರಣ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದರು.

ಇತ್ತೀಚೆಗೆ ಪಾಂಡ್ಯ ತಮ್ಮನ್ನು ವಿರೋಧಿಸಿದವರಿಗೆ ನಟ ಅಮಿತಾಭ್ ಬಚ್ಚನ್ ಶೈಲಿಯಲ್ಲಿ ತಕ್ಕ ಉತ್ತರ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ‘ಸಂಬಂಧಗಳಲ್ಲಿ ನಾನು ನಿಮ್ಮ ಕ್ಯಾಪ್ಟನ್​ ಆಗುತ್ತೇನೆ. ನನ್ನ ಹೆಸರು ಹಾರ್ದಿಕ್​ ಪಾಂಡ್ಯ’.(ರಿಶ್ತೆ ಮೆ ಹಮ್‌ ತುಮಾರೆ ಕ್ಯಾಪ್ಟನ್‌ ಲಗ್ತೇ ಹೈ ನಾಮ್‌ ಹೈ ಪಾಂಡೆ) ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದ್ದರು.

Exit mobile version