ಮುಂಬಯಿ: ಮುಂದಿನ ವರ್ಷ ನಡೆಯುವ ಐಪಿಎಲ್ ಟೂರ್ನಿಯ(IPL 2024) ಆಟಗಾರರ ಹರಾಜು ಡಿ.19ರಂದು(ipl 2024 auction) ನಡೆಯಲಿದೆ. ಇದಕ್ಕೂ ಮುನ್ನ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದೆ. ನ.26 ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಈ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಐಪಿಎಲ್ 2024ರ ಟ್ರೇಡಿಂಗ್ ವಿಂಡೋ ನಿಯಮದ ಪ್ರಕಾರ, ಫ್ರಾಂಚೈಸಿಗಳು ಆಟಗಾರರ ವಿನಿಮಯ ಮಾಡಬಹುದಾಗಿದೆ. ಜತೆಗೆ ತಂಡದಲ್ಲಿ ಬದಲಾವಣೆ ಮಾಡುವುದರೊಂದಿಗೆ ನಗದು ವ್ಯಹಾರದ ಬಗ್ಗೆ ಸಹ ಆಯ್ಕೆ ನಡೆಸಬಹುದಾಗಿದೆ. ಆದರೆ ನವೆಂಬರ್ 26ರೊಳಗೆ ಇದನ್ನು ಮಾಡಬೇಕು. ಈಗಾಗಲೇ ಕೆಲ ಫ್ರಾಂಚೈಸಿಗಳು ಆಟಗಾರರನ್ನು ಟ್ರೇಡಿಂಗ್ ಮೂಲಕ ಖರೀದಿ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ, 2024 ಐಪಿಎಲ್ ಹರಾಜು ಪ್ರಕ್ರಿಯೆಗಾಗಿ 590 ಪ್ಲೇಯರ್ಸ್ಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
A total of 590 players have been shortlisted for IPL 2024 Auction. (News18). pic.twitter.com/UeZjzUTl3Z
— Mufaddal Vohra (@mufaddal_vohra) November 23, 2023
ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಅಧಿಕವಾಗಿದೆ. ಅವರು ಈ ಐಪಿಎಲ್ ಆಟಗಾರರ ಹರಾಜಿನಲ್ಲಿ ಹೆಸರು ನೊಂದಾಯಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಅವರ ಬದಲು ನ್ಯೂಜಿಲ್ಯಾಂಡ್ ತಂಡದ ರವಿನ್ ರವೀಂದ್ರ ಅವರನ್ನು ತಂಡಕ್ಕೆ ಸೆರಿಸಿಕೊಳ್ಳಲು ಫ್ರಾ.ಚೈಸಿ ಒಲವು ತೋರಿದೆ ಎನ್ನಲಾಗಿದೆ. ಇವರು ಮಾತ್ರವಲ್ಲದೆ ಅಫಘಾನಿಸ್ತಾನದ ಅಜ್ಮತುಲ್ಲ ಒಮರ್‌ಜಾಯ್ ಅವರನ್ನು ಕೂಡ ಖರೀದಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ IND vs AUS T20: ಜೋಶ್ ಇಂಗ್ಲಿಸ್ ಶತಕ; ಭಾರತ ಗೆಲುವಿಗೆ ಬೃಹತ್ ಮೊತ್ತದ ಗುರಿ
ಮೊಣಕಾಲಿನ ಶಸ ಚಿಕಿತ್ಸೆಗೆ ಒಳಗಾಗಲಿರುವ ಬೆನ್ ಸ್ಟೋಕ್ಸ್ 2024ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಮಿನಿ ಹರಾಜಿನಲ್ಲಿ ಅವರನ್ನು 16.25 ಕೋಟಿ ರೂ.ಗೆ ಸಿಎಸ್‌ಕೆ ಖರೀದಿ ಮಾಡಿತ್ತು. ಆದರೆ ಅವರು ಕಾಲಿನ ಬೆರಳು ಗಾಯದಿಂದಾಗಿ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಉಳಿದ ಎಲ್ಕಲ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿಯೂ ಧೋನಿ ಸಾರಥ್ಯದ ಚೆನ್ನೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಏಕದಿನ ಕ್ರಿಕೆಟ್ಗೆ ನಿವೃತ್ತಿಯಾಗಿದ್ದ ಸ್ಟೋಕ್ಸ್ ಅವರನ್ನು ಏಕದಿನ ವಿಶ್ವಕಪ್ ಆಡುವ ಸಲುವಾಗಿ ನಿವೃತ್ತಿಯನ್ನು ವಾಪಸ್ ಪಡೆದು ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರ ಅವರು ಇಲ್ಲಿಯೂ ಗಾಯದಿಂದಲೇ ಕಳಪೆ ಪ್ರದರ್ಶನ ತೋರಿದ್ದರು. ಅಂತಿಮ ಹಂತದಲ್ಲಿ ಒಂದು ಶತಕ ಬಾರಿಸಿದ್ದರು. ಇದೊಂದೆ ಅವರ ಸಾಧನೆಯಾಗಿತ್ತು. ಸದ್ಯ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು ಸಂಪೂರ್ಣವಾಗಿ ಗುಣಮುಖರಾಗಲು 2 ತಿಂಗಳ ಕಾಲಾವಕಾಶದ ಅಗತ್ಯವಿದೆ ಎನ್ನಲಾಗಿದೆ. ಅತಿಯಾದ ಕ್ರಿಕೆಟ್ ಆಡಿ ಪದೇಪದೆ ಗಾಯಕ್ಕೆ ತುತ್ತಾಗುತ್ತಿರುವ ಅವರು ಐಪಿಎಲ್ನಿಂದ ದೂರ ಉಳಿಯುವ ಸಾಧ್ಯತೆಯೂ ಇದೆ.
ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ರಚಿನ್ ಅವರನ್ನು ಖರಿದೀಸುವ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್ ಆಡುವ ವೇಳೆ ಸ್ವತಃ ರಚಿನ್ ಅವರು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.