Site icon Vistara News

IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

IPL 2024

ಬೆಂಗಳೂರು: ಆರ್​ಸಿಬಿ(Royal Challengers Bengaluru) ವಿರುದ್ಧ ಸೋಮವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡದ ಆಟಗಾರ ಅಬ್ದುಲ್​ ಸಮದ್(Abdul Samad)​ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಸರ್ಫರಾಜ್​ ಖಾನ್​ ದಾಖಲೆಯನ್ನು ಮುರಿದಿದ್ದಾರೆ.

ಹೌದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 10 ಎಸೆತಗಳಿಂದ ಅಜೇಯ 37 ರನ್​ ಬಾರಿಸಿದ ಅಬ್ದುಲ್​ ಸಮದ್(370 ಸ್ಟ್ರೈಕ್​ ರೇಟ್) ಅವರು ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಸ್ಟ್ರೈಕ್​ ರೇಟ್​(10 ಎಸೆತಗಳಲ್ಲಿ) ಪಡೆದ ಆಟಗಾರ ಎನ್ನುವ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಸರ್ಫರಾಜ್​ ಖಾನ್​(350 ಸ್ಟ್ರೈಕ್​ ರೇಟ್) ಹೆಸರಿನಲ್ಲಿತ್ತು. ಸರ್ಫರಾಜ್ 2016ರಲ್ಲಿ ಆರ್​ಸಿಬಿ ಪರ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ. ಈ ಬಾರಿ ಐಪಿಎಲ್​ನಲ್ಲಿ ಸರ್ಫರಾಜ್​ ಬಿಡ್ಡಿಂಗ್​ ಆಗದೆ ಆಡುವ ಅವಕಾಶ ಕಳೆದುಕೊಂಡರು.

ಅತ್ಯಧಿಕ ಸ್ಟ್ರೈಕ್​ ರೇಟ್(10 ಎಸೆತಗಳಲ್ಲಿ) ಪಡೆದ ಬ್ಯಾಟರ್​ಗಳು


ಅಬ್ದುಲ್​ ಸಮದ್-370

ಸರ್ಫರಾಜ್​ ಖಾನ್​-350

ಸುರೇಶ್​ ರೈನಾ-348

ಯೂಸುಫ್​ ಪಠಾಣ್​-327

ಅಭಿಷೇಕ್​ ಪೋರೆಲ್​-320

ಇದನ್ನೂ ಓದಿ IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ


ಅಬ್ದುಲ್​ ಸಮದ್​ ಅವರು ಆರ್​ಸಿಬಿ ಬೌಲರ್​ ಟೋಪ್ಲಿ ಓವರ್​ನಲ್ಲಿ ಸತತ 2 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಮಿಂಚಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್​ ನರೆವಿನಿಂದ ತಂಡ 280ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿತು. ಒಂದೊಮ್ಮೆ ಅವರು ಈ ಬಿರುಸಿನ ಆಟವಾಡದೇ ಹೋಗಿದ್ದರೆ ಆರ್​ಸಿಬಿಗೆ ಗೆಲ್ಲುವ ಅವಕಾಶವಿತ್ತು. ಏಕೆಂದರೆ ಸೋಲಿನ ಅಂತರದ ಕೇವಲ 25 ರನ್​.

ಆರ್​ಸಿಬಿ ವಿರುದ್ಧ 287 ರನ್ ಬಾರಿಸುವ ಮೂಲಕ ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ 277 ರನ್​ ಬಾರಿಸಿ ದಾಖಲೆ ಬರೆದಿದ್ದ ಹೈದರಾಬಾದ್​ ತನ್ನ ಈ ದಾಖಲೆಯನ್ನು ಮತ್ತೆ ತಿದ್ದಿ ಬರೆಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಉಭಯ ತಂಡಗಳು ಸೇರಿ 549 ರನ್ ಬಾರಿಸಿತು.​ ಇದು ಕೂಡ ವಿಶ್ವ ದಾಖಲೆಯಾಗಿದೆ. ಟಿ20 ಕ್ರಿಕೆಟ್​ನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಮೊತ್ತವಾಗಿದೆ.

ಪಂದ್ಯ ಗೆದ್ದ ಹೈದರಾಬಾದ್​


ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್​ ತಂಡ 25 ರನ್​ಗಳ ಗೆಲುವು ಕಂಡಿತು. ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಒನ್​ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್​ 35 ಎಸೆತಗಳಲ್ಲಿ 83 ರನ್ ಬಾರಿಸಿದರು.

Exit mobile version