Site icon Vistara News

IPL 2024: ಆರ್​ಸಿಬಿ ಅನ್​ಬಾಕ್ಸ್​ನಲ್ಲಿ​ ಅಲಾನ್ ವಾಕರ್ ಸೂಪರ್​ ಡಿಜೆ ಸಂಭ್ರಮ

RCB Unbox

ಬೆಂಗಳೂರು: ಆರ್​ಸಿಬಿ(RCB) ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್​ 19ರಂದು ನಿಗದಿಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್, ಅಲಾನ್ ವಾಕರ್(Alan Walker), ನೀತಿ ಮೋಹನ್ ಸೇರಿ ಹಲವು ಸಿಂಗರ್​ಗಳು ಪ್ರದರ್ಶನ ನೀಡಲಿದ್ದಾರೆ.


ಆರ್​ಸಿಬಿ ತನ್ನ ಅಭಿಮಾನಿಗಳನ್ನು ತಂಡದ 12ನೇ ಆಟಗಾರ ಎಂದು ಪರಿಗಣಿಸುತ್ತದೆ. ಇದೇ ಕಾರಣದಿಂದ ಆರ್​ಸಿಬಿ ಅನ್​ಬಾಕ್ಸ್ ಎನ್ನುವ ಕಾರ್ಯಕ್ರಮವನ್ನು ಫ್ರಾಂಚೈಸಿ ನಡೆಸುತ್ತಿದೆ. ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿಯ ಅಚ್ಚರಿಗಳಲ್ಲಪೊಂದು ಹೆಸರು ಬದಲಾವಣೆ. ಬ್ಯಾಂಗಳೂರು ಬದಲಾಗಿ ಬೆಂಗಳೂರು ಎಂದು ನಾಮಕರಣ ಮಾಡುವುದು ಈಗಾಗಲೇ ಖಚಿತವಾಗಿದೆ. ಇನ್ನುಳಿದ ಅಚ್ಚರಿಯ ಸಂಗತಿ ಏನೆಂಬುದನ್ನು ಆರ್​ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ IPL 2023 : ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು ಇವರು

ಈಗಾಗಲೇ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದ ಟಿಕೆಟ್​ಗಳು ಬಹು ಸಂಖ್ಯೆಯಲ್ಲಿ ಸೇಲ್​ ಆಗಿದೆ. ಆನ್​ಲೈನ್​ನಲ್ಲಿ ಮತ್ತು ಆರ್​ಸಿಬಿ ವೆಬ್​ಸೈಟ್​ನಲ್ಲಿ ಟಿಕೆಟ್​ಗಳು ಖರೀದಿ ಮಾಡಬಹುದಾಗಿದೆ. ಮೂಲಗಳ ಪ್ರಕಾರ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಯೂ(Virat Kohli) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆರ್​ಸಿಬಿ ಪರ 16 ವರ್ಷ ಪೂರೈಸಿರುವ ಕೊಹ್ಲಿಗೆ ವಿಶೇಷ ಸನ್ಮಾನ ಮಾಡುವ ಸಾಧ್ಯತೆ ಇದೆ. ಆದರೆ ಇದುವರೆಗೆ ಖಚಿತ ಮಾಹಿತಿ ಬಂದಿಲ್ಲ.

Exit mobile version