ಜೈಪುರ: ಯಜುವೇಂದ್ರ ಚಹಲ್(Yuzvendra Chahal) ಮತ್ತು ಧನಶ್ರೀ ವರ್ಮಾ(Dhanashree Verma) ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ತಲೆಕಡಿಸಿಕೊಳ್ಳದೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. 150ನೇ ಐಪಿಎಲ್(IPL 2024) ಪಂದ್ಯವನ್ನಾಡುತ್ತಿರುವ ಚಹಲ್ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದಾರೆ. ಈ ವಿಡಿಯೊವನ್ನು ರಾಜಸ್ಥಾನ್ ರಾಯಲ್ಸ್(Rajasthan Royals) ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಗುಜರಾತ್(Gujarat Titans) ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್ ಅವರು ಐಪಿಎಲ್ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದರು. ಸ್ಮರಣೀಯ ಪಂದ್ಯವನ್ನಾಡುವ ಪತಿಗೆ ವಿಡಿಯೊ ಮೂಲಕ ಶುಭ ಹಾರೈಸಿದ ಪತ್ನಿ ಧನಶ್ರೀ, “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್ಬ್ಯಾಕ್ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್ ತೆಗೆಯಬಲ್ಲ ಬೌಲರ್ ನೀವಾಗಿದ್ದೀರಿ” ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ IPL 2024: ಆರ್ಸಿಬಿ ಸೋಲಿಗೆ ಮ್ಯಾಕ್ಸ್ವೆಲ್ ಕುಡಿತವೇ ಕಾರಣವಂತೆ!; ದಿನಕ್ಕೆ ಎಷ್ಟು ಪೆಗ್ ಬೇಕು?
To Yuzi on his 150th IPL game, with love from his biggest supporter. 💗 pic.twitter.com/rVyfsD7eYN
— Rajasthan Royals (@rajasthanroyals) April 10, 2024
“ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ 150 ನೇ ಐಪಿಎಲ್ ಪಂದ್ಯವನ್ನು ಆನಂದಿಸಿ” ಎಂದು ಶುಭ ಹಾರೈಸಿದ್ದಾರೆ. ಚಹಲ್ ಅವರು ಕಳೆದ ವರ್ಷ ಜನವರಿ ಬಳಿಕ ಭಾರತ ಪರ ಯಾವುದೇ ಏಕದಿನ ಕ್ರಿಕೆಟ್ ಆಡಿಲ್ಲ. ಏಷ್ಯಾಕಪ್ ಸೇರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
2013ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ಚಹಲ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಚಹಲ್ಗೆ ಇದೇ ಜೂನ್ನಲ್ಲಿ ನಡೆಎಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಚಹಲ್ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್, 80 ಟಿ20 ಆಡಿ 96 ವಿಕೆಟ್ ಕಡೆವಿದ್ದಾರೆ. ಐಪಿಎಲ್ನಲ್ಲಿ 195* ವಿಕೆಟ್ ಪಡೆದಿದ್ದಾರೆ. ಇದುವರೆಗೂ ಟೆಸ್ಟ್ ಕ್ರಿಕೆಟ್ ಆಡಿಲ್ಲ.