Site icon Vistara News

IPL 2024: ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಭದ್ರತಾ ವೈಫಲ್ಯ; ಕೊಹ್ಲಿ ಪ್ರಾಣಕ್ಕೆ ಮತ್ತೆ ಕುತ್ತು

IPL 2024

ಜೈಪುರ: ಪ್ರಸಕ್ತ ಸಾಗುತ್ತಿರುವ ಐಪಿಎಲ್(IPL 2024)​ ಟೂರ್ನಿಯಲ್ಲಿ ಪಂದ್ಯದ ವೇಳೆ ಭಾರೀ ಭದ್ರತಾ ವೈಫಲ್ಯ ಕಂಡು ಬರುತ್ತಿದೆ. ಪ್ರೇಕ್ಷಕರ ಗ್ಯಾಲರಿಂದ ಮೈದಾನಕ್ಕೆ ಓಡಿ ಬಂದು ಆಟಗಾರರನ್ನು ತಬ್ಬಿಕೊಳ್ಳುತ್ತಿರುವ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಅದರಲ್ಲೂ ವಿರಾಟ್​ ಕೊಹ್ಲಿಗೆ(Virat Kohli) ಇದು ಹೆಚ್ಚಾಗಿ ಸಂಭವಿಸುತ್ತಿದೆ.

ಕೆಲವು ದಿನಗಳ ಹಿಂದೆ ಆರ್​ಸಿಬಿ ಮತ್ತು ಪಂಜಾಬ್​ ನಡುವಣ ಪಂದ್ಯದ ವೇಳೆ ಅಭಿಮಾನಿಯೊಬ್ಬ ವಿರಾಟ್​ ಕೊಹ್ಲಿಯ(virat kohli) ಕಾಲಿಗೆ ಬಿದ್ದು ಅವರನ್ನು ತಪ್ಪಿಕೊಂಡ ಘಟನೆ ನಡೆದಿತ್ತು. ಇದೀಗ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿಯೂ ಪುಟ್ಟ ಅಭಿಮಾನಿಯೊಬ್ಬ ಕೊಹ್ಲಿಯ ಜೆರ್ಸಿ ಧರಿಸಿ ಮೈದಾನಕ್ಕೆ ಓಡಿ ಬಂದು ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ಈ ಘಟನೆಯನ್ನು ಕಂಡ ಅನೇಕ ನೆಟ್ಟಿಗರು ಸ್ಟೇಡಿಯಂ ಭದ್ರತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರ ಜೀವಕ್ಕೆ ಕುತ್ತು ತರುವ ಘಟನೆ ಪದೇಪದೆ ನಡೆಯುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.


ವಿರಾಟ್​ ಕೊಹ್ಲಿ ಅವರು ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿ ಏಕಾಏಕಿ ಮೈದಾನಕ್ಕೆ ಓಡಿ ಬಂದು ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಸ್ಟೇಡಿಯಂನಿಂದ ಹೊರ ಕಳುಹಿಸಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ; ಒಂದೇ ದಿನ 2 ಪಂದ್ಯ

ಮಾರ್ಚ್​ 25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಇದೇ ಸಂದರ್ಭ ರಾಯಚೂರು ಮೂಲದ ಕುರುಮಪ್ಪ‌ ಎನ್ನುವ ಅಭಿಮಾನಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಇದಾದ ಬಳಿಕ ಸೆಲ್ಲಾರ್​ಗೆ ಕರೆತಂದ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ ಥಳಿಸಿದ್ದರು. ಇದರ ವಿಡಿಯೊ ಕೂಡ ವೈರಲ್​ ಆಗಿತ್ತು.

ಇತ್ತೀಚೆಗೆ ಮುಂಬೈ ಮತ್ತು ರಾಜಸ್ಥಾನ್​ ನಡುವಿನ ಪಂದ್ಯದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಮುಂಬಯಿ ತಂಡ ಫೀಲ್ಡಿಂಗ್​ ನಡೆಸಲು ಸಿದ್ಧತೆ ನಡೆಸುತ್ತಿದ್ದ ನಡೆಸುತ್ತಿತ್ತು. ರೋಹಿತ್​ ಶರ್ಮ(Rohit Sharma) ಅವರು ಸ್ಲಿಪ್​ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ರೋಹಿತ್​ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದ. ಹಿಂದಿನಿಂದ ಓಡಿ ಬಂದ ಈತನನ್ನು ಕಂಡು ರೋಹಿತ್​ ಒಂದು ಕ್ಷಣ ಭಯಭೀತರಾಗಿದ್ದರು.

ರೈನಾ ದಾಖಲೆ ಮುರಿದ ಕೊಹ್ಲಿ


ವಿರಾಟ್​ ಕೊಹ್ಲಿ(Virat Kohli) ಅವರು ಸೋಲಿನ ಹೊರತಾಗಿಯೂ ಐಪಿಎಲ್​ನಲ್ಲಿ(IPL 2024) ಅತ್ಯಧಿಕ ಕ್ಯಾಚ್​ ಪಡೆದ ಸುರೇಶ್​ ರೈನಾ ದಾಖಲೆಯನ್ನು ಮುರಿದಿದ್ದಾರೆ. ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಐಪಿಎಲ್​ನಲ್ಲಿ ತಮ್ಮ 8ನೇ ಶತಕ ದಾಖಲಿಸಿದರು. 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಆದರೆ ಪಂದ್ಯ ಸೋತ ಕಾರಣ ಅವರ ಈ ಶತಕದಾಟ ವ್ಯರ್ಥವಾಯಿತು. ಇದೇ ಪಂದ್ಯದಲ್ಲಿ ಕೊಹ್ಲಿ ಅವರು ರಿಯಾನ್​ ಪರಾಗ್​ ಅವರ ಕ್ಯಾಚ್​ ಹಿಡಿಯುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ ಆಗಿ ಹೊರಹೊಮ್ಮಿದರು.

ಪಂದ್ಯಕ್ಕೂ ಮುನ್ನ ಕೊಹ್ಲಿ ಅವರು ಸುರೇಶ್​ ರೈನಾ ಜತೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಕ್ಯಾಚ್​ಗಳ ಸಂಖ್ಯೆಯನ್ನು 110ಕ್ಕೆ ಏರಿಸುವ ಮೂಲಕ 109 ಕ್ಯಾಚ್​ ಪಡೆದ ಸುರೇಶ್​ ರೈನಾ ಅವರನ್ನು ಹಿಂದಿಕ್ಕಿದ್ದಾರೆ. 103 ಕ್ಯಾಚ್​ ಹಿಡಿದ ಮುಂಬೈ ತಂಡದ ಮಾಜಿ ಆಟಗಾರ ಕೈರಾನ್ ಪೊಲಾರ್ಡ್​ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್​ ಶರ್ಮ ಅವರು ಇಂದು ನಡೆಯುವ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಒಂದು ಕ್ಯಾಚ್ ಹಿಡಿದರೆ ಕ್ಯಾಚ್​ಗಳ ಶತಕ ಪೂರ್ತಿಗೊಳಿಸಿದೆ. ಈ ಮೂಲಕ 100 ಕ್ಯಾಚ್​ ಹಿಡಿದ ಸಾಧನೆ ಮಾಡಲಿದ್ದಾರೆ.

Exit mobile version