ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2024) ಫೀವರ್ ಸದ್ಯ ಎಲ್ಲ ಕಡೆ ಜೋರಾಗಿದೆ. ಪಂದ್ಯಾವಳಿ ಆರಂಭಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮಾರ್ಚ್ 22ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನ ಪಂದ್ಯದಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಡಲಿದೆ. ಕಳೆದ 16 ಆವೃತ್ತಿಯ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ(Most Hundreds in IPL) ಬಾರಿಸಿದ 5 ಬ್ಯಾಟರ್ಗಳ ಮಾಹಿತಿ ಇಂತಿದೆ.
ವಿರಾಟ್ ಕೊಹ್ಲಿ
16 ಆವೃತ್ತಿಯಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಆಡಿರುವ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅವರು ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 237 ಪಂದ್ಯಗಳಲ್ಲಿ 229 ಇನಿಂಗ್ಸ್ ಬ್ಯಾಟಿಂಗ್ ನಡೆಸಿರುವ ಕೊಹ್ಲಿ 7 ಶತಕ ಬಾರಿಸಿದ್ದಾರೆ. 7263 ರನ್ ಬಾರಿಸಿದ್ದಾರೆ. 113 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಕ್ರಿಸ್ ಗೇಲ್
ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ, ಯುನಿವರ್ಸ್ ಖ್ಯಾತಿಯ ಕ್ರಿಸ್ ಗೇಲ್(Chris Gayle) ಅವರು ಅತಿ ಹೆಚ್ಚು ಐಪಿಎಲ್ ಶತಕ ಸಾಧಕರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗೇಲ್ ಕೆಕೆಆರ್,ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿ 6 ಶತಕ ಬಾರಿಸಿದ್ದಾರೆ. ಆರ್ಸಿಬಿ ಪರ ಆಡುವ ವೇಳೆ 175* ರನ್ ಬಾರಿಸಿದ್ದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಜಾಸ್ ಬಟ್ಲರ್
ರಾಜಸ್ಥಾನ್ ತಂಡದ ಹಾರ್ಡ್ ಹಿಟ್ಟರ್, ಇಂಗ್ಲೆಂಡ್ನ ಜಾಸ್ ಬಟ್ಲರ್(Jos Buttler) ಅವರು ಐಪಿಎಲ್ನಲ್ಲಿ 5 ಶತಕ ಬಾರಿಸಿದ್ದಾರೆ. ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅವರಿಗೆ ಮೂರನೇ ಸ್ಥಾನ. 96 ಐಪಿಎಲ್ ಪಂದ್ಯ ಆಡಿ 3223 ರನ್ ಬಾರಿಸಿದ್ದಾರೆ. 124 ಗರಿಷ್ಠ ವೈಯಕ್ತಿಕ ಸ್ಕೋರ್.
ಇದನ್ನೂ ಓದಿ IPL 2024: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್ ಓವರ್ ಎಸೆದ 5 ಬೌಲರ್ಗಳು
ಕೆ.ಎಲ್ ರಾಹುಲ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು 118 ಪಂದ್ಯಗಳನ್ನಾಡಿ 4 ಶತಕ ಬಾರಿಸಿದ್ದಾರೆ. ಅತಿ ಹೆಚ್ಚು ಶತಕ ಸಾಧಕರ ಪೈಕಿ ಅವರಿಗೆ ನಾಲ್ಕನೇ ಸ್ಥಾನ. 4163 ರನ್ ಕಲೆ ಹಾಕಿದ್ದಾರೆ. 132* ರನ್ ಗರಿಷ್ಠ ವೈಯಕ್ತಿಕ ಸ್ಕೋರ್. ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಅವರು ಈ ಬಾರಿ ಆಡುವುದು ಇನ್ನೂ ಖಚಿತವಾಗಿಲ್ಲ. ಒಟ್ಟು ಐದು ತಂಡಗಳ ಪರ ಇವರು ಐಪಿಎಲ್ ಆಡಿದ್ದಾರೆ.
ಶೇನ್ ವಾಟ್ಸನ್
ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿದ್ದ, ಶೇನ್ ವ್ಯಾಟ್ಸನ್(shane watson) ಅವರು ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 4 ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ 4 ಶತಕ ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ವಾರ್ನರ್ ಶತಕ ಬಾರಿಸಿದರೆ ವ್ಯಾಟ್ಸನ್ ಒಂದು ಸ್ಥಾನ ಕುಸಿತ ಕಾಣಲಿದ್ದಾರೆ.